Arrestkohli | ರೋಹಿತ್ ಅಭಿಮಾನಿಯ ಕೊಲೆ.. ಕೊಹ್ಲಿ ಅರೆಸ್ಟ್ ಗೆ ಡಿಮ್ಯಾಂಡ್
ಒಬ್ಬ ದುರಾಭಿಮಾನಿ ಮಾಡಿದ ತಪ್ಪಿನಿಂದಾಗಿ ಪ್ರಸ್ತುತ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ನಿದ್ದೆಗೆಡಿಸಿದೆ.
ಹೌದು..! ತಮಿಳುನಾಡಿನ ಮಲ್ಲೂರ್ ಗೆ ಸೇರಿದ ಧರ್ಮರಾಜ್, ವಿಗ್ನೇಶ್ ಅನ್ನೋ ಯುವಕರು ಒಳ್ಳೆಯ ಸ್ನೇಹಿತರು, ಕ್ರಿಕೆಟ್ ಪ್ರೇಮಿಗಳು ಕೂಡ.
ಇದರಲ್ಲಿ ಧರ್ಮರಾಜ್ ವಿರಾಟ್ ಕೊಹ್ಲಿಗೆ ವೀರಾಭಿಮಾನಿ, ವಿಗ್ನೇಶ್ ರೋಹಿತ್ ಶರ್ಮಾಗೆ ಡೈ ಹಾರ್ಡ್ ಫ್ಯಾನ್.
ಇವರಿಬ್ಬರು ಕಳೆದ ವಾರ ಕುಡಿದು ತಮ್ಮ ನೆಚ್ಚಿನ ಕ್ರಿಕೆಟರ್ ಗ್ರೇಟ್ ಅಂತಾ ಗಲಾಟೆ ಮಾಡಿಕೊಂಡಿದ್ದಾರೆ.
ಈ ವೇಳೆ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಭಿಯಾನಿಯನ್ನು ಕೊಡಲಿಯಿಂದ ದಾರುಣವಾಗಿ ಕೊಲೆ ಮಾಡಿದ್ದಾರೆ.
ಈ ಘಟನೆಯಿಂದಾಗಿ ಧರ್ಮರಾಜ್ ಅವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ದುರಾಭಿಮಾನ ಯಾಕೆ ? ಎಲ್ಲೋಗುತ್ತಿದೆ ಈ ಸಮಾಜ ? ಕೆಲವರು ಈ ಘಟನೆಗೆ ಪರೋಕ್ಷವಾಗಿ ಕಾರಣವಾದ ವಿರಾಟ್ ಕೊಹ್ಲಿ ಅವರನ್ನು ಬಂಧಿಸಬೇಕು ಅಂತಾ ಡಿಮ್ಯಾಂಡ್ ಮಾಡುತ್ತಿದ್ದಾರೆ.
ರೋಹಿತ್ ಶರ್ಮಾ ಫ್ಯಾನ್ಸ್.. #Arrestkohli ಅನ್ನೋ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.