Arshdeep Singh: ಚೊಚ್ಚಲ ಪಂದ್ಯದಲ್ಲಿಯೇ ಅರ್ಷದೀಪ್ ಶೈನ್.. 16 ವರ್ಷಗಳ ದಾಖಲೆ ಬ್ರೇಕ್
ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಬೌಲರ್ ಅರ್ಷದೀಪ್ ಸಿಂಗ್ ಕನಸ್ಸು ನನಸಾಗಿದೆ.
ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕೈಯಲ್ಲಿ ಅರ್ಷದೀಪ್ ಕ್ಯಾಪ್ ತೆಗೆದುಕೊಂಡರು.

ಮೊದಲ ಪಂದ್ಯದಲ್ಲಿಯೇ ಅಬ್ಬರದ ಪ್ರದರ್ಶಣ ನೀಡಿರುವ ಅರ್ಷದೀಪ್ 3.3 ಓವರ್ ಗಳಲ್ಲಿ ಒಂದು ಮೇಡಿನ್ ಮಾಡಿ 16 ವರ್ಷಗಳ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲರ್ ಜುಲನ್ ಗೋಸ್ವಾಮಿ, ಅಜಿತ್ ಅಗಾರ್ಕರ್ ಪದಾರ್ಪಣೆ ಪಂದ್ಯದಲ್ಲಿಯೇ ಮೆಡಿನ್ ಓವರ್ ಎಸೆದಿದ್ದರು. ಇದೀಗ ಅರ್ಷದೀಪ್ ಆ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 3.3 ಓವರ್ ಗಳನ್ನು ಎಸೆದ ಅರ್ಷದೀಪ್ ಸಿಂಗ್ ಕೇವಲ 18 ರನ್ ಗಳನ್ನು ನೀಡಿ ಎರಡು ವಿಕೆಟ್ ಪಡೆದಿದ್ದಾರೆ.