ಬೀಜಿಂಗ್: ಅರುಣಾಚಲ ಪ್ರದೇಶ ನಮ್ಮದು. ಭಾರತ ಆಕ್ರಮಿಸಿಕೊಂಡಿದೆ ಎಂದು ಚೀನಾ ಪ್ರತಿಪಾದಿಸಿ ಕ್ಯಾತೆ ತೆಗೆದಿದೆ.
ಭಾರತಗಡಿ ರಾಜ್ಯ ಅರುಣಾಚಲ ಪ್ರದೇಶ ಭಾರತದ ನೈಸರ್ಗಿಕ ಭಾಗ. ಆ ರಾಜ್ಯದ ಮೇಲೆ ಚೀನಾ ಹಕ್ಕು ಸಾಧಿಸುವುದು ಅಸಂಬದ್ಧ ಎಂದು ಭಾರತ ಹೇಳಿತ್ತು. ಇದಕ್ಕೆ ಎಸ್.ಜೈಶಂಕರ್ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪ್ರತಿಕ್ರಿಯೆ ಈ ರೀತಿ ನೀಡಿದ್ದಾರೆ.
ಭಾರತ ಹಾಗೂ ಚೀನಾ ನಡುವೆ ಮಧ್ಯೆ ಗಡಿಯನ್ನು ಎಂದಿಗೂ ಇತ್ಯರ್ಥಪಡಿಸಲಾಗಿಲ್ಲ. ಅರುಣಾಚಲ ಪ್ರದೇಶಕ್ಕೆ ಚೀನಾದ ಅಧಿಕೃತ ಹೆಸರು ಜಂಗ್ನಾನ್. ಭಾರತವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದೆ. ಚೀನಾದ ಭಾಗವಾಗಿತ್ತು ಎಂದು ಲಿನ್ ಹೇಳಿದ್ದಾರೆ.
ಈ ಪ್ರದೇಶದ ಮೇಲೆ ಪರಿಣಾಮಕಾರಿ ಆಡಳಿತವನ್ನು ಚೀನಾ ಹೊಂದಿದೆ. ಅಕ್ರಮವಾಗಿ ವಶಪಡಿಸಿಕೊಂಡ ಭೂಪ್ರದೇಶವನ್ನು ಭಾರತವು 1987 ರಲ್ಲಿ ಅರುಣಾಚಲ ಪ್ರದೇಶ ಎಂದು ಕರೆಯಿತು. ನಾವು ಅವರ ಕ್ರಮಗಳ ವಿರುದ್ಧ ಬಲವಾದ ಹೇಳಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಪ್ರತಿಪಾದಿಸಿದೆ. ತನ್ನ ಹಕ್ಕುಗಳನ್ನು ಸಾಧಿಸಲು ಭಾರತೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುವುದು ಸರಿಯಲ್ಲ ಎಂದು ವಿರೋಧಿಸಿದೆ.