ಆಶಸ್ ಸರಣಿ | ಇಂಗ್ಲೆಂಡ್ ತಂಡಕ್ಕೆ ಜೇಮ್ಸ್ ಆಂಡರ್ಸನ್ ವಾಪಸ್
ಆಶಸ್ ಸರಣಿಯ ಎರಡನೇ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸಜ್ಜಾಗಿದ್ದು, ಅಡಿಲೇಡ್ ನಲ್ಲಿ ಆಶಸ್ ಸರಣಿಯ ಡೇ ಅಂಡ್ ನೈಟ್ ಪಂದ್ಯ ನಡೆಯುತ್ತಿದೆ.
ಈಗಾಗಲೇ 8 ಡೇ ಅಂಡ್ ನೈಟ್ ಪಂದ್ಯಗನ್ನಾಡಿರುವ ಆಸೀಸ್ ಅಜೇಯವಾಗಿ ನಿಂತಿದೆ. ಹೀಗಾಗಿ ಅಡಿಲೇಡ್ ಪಂದ್ಯದಲ್ಲೂ ಕಾಂಗರೂಗಳು ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮತ್ತೊಂದೆಡೆ ಈಗಾಗಲೇ ಮೊದಲ ಪಂದ್ಯ ಸೋತಿರುವ ಇಂಗ್ಲೆಂಡ್ ಗಾಯಗೊಂಡ ಹುಲಿಯಂತಾಗಿದೆ.
ಹೀಗಾಗಿ ಎರಡನೇ ಪಂದ್ಯ ಗೆಲ್ಲಲು ಸಾಕಷ್ಟು ಪ್ಲಾನ್ ಮಾಡಿಕೊಳ್ಳುತ್ತಿದೆ. ಆಸೀಸ್ ಟಕ್ಕರ್ ಕೊಡಲು ಮುಂದಾಗಿರುವ ಇಂಗ್ಲೆಂಡ್, ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡಿಕೊಂಡಿದೆ.
ಮುಖ್ಯವಾಗಿ ಫಿಟ್ ನೆಸ್ ಸಮಸ್ಯೆಯಿಂದ ಮೊದಲ ಮ್ಯಾಚ್ ಗೆ ಅಲಭ್ಯರಾಗಿದ್ದ ಸ್ಟಾರ್ ಬೌಲರ್ ಗಳಾದ ಜೇಮ್ಸ್ ಅಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.