Ravichandran Ashwin : ರಿಟೈರ್ಡ್ ಔಟ್ ಗೂ ರಿಟೈರ್ಡ್ ಹರ್ಟ್ ಗೂ ವ್ಯತ್ಯಾಸವೇನು..?
15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನ 20ನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಸಂಚಲನಾತ್ಮ ನಿರ್ಣಯಗಳನ್ನು ತೆಗೆದುಕೊಂಡರು. 23 ಎಸೆತಗಳಲ್ಲಿ 28 ರನ್ ಗಳಿ ಉತ್ತಮವಾಗಿ ಆಡುತ್ತಿದ್ದ ಅಶ್ವಿನ್, ಯಾರೂ ನಿರೀಕ್ಷಿಸದ ರೀತಿಯಲ್ಲಿ ರಿಟೈರ್ಡ್ ಔಟ್ ಆದರು. ಆ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಹೀಗೆ ರಿಟೈರ್ಡ್ ಔಟ್ ಆದ ಮೊದಲ ಆಟಗಾರ ಎಂದು ಇತಿಹಾಸ ನಿರ್ಮಿಸಿದರು.
ಅಂದಹಾಗೆ ಆಶ್ವಿನ್ ಈ ರೀತಿ ಮಾಡಲು ಪ್ರಮುಖ ಕಾರಣ ರಿಯಾನ್ ಪರಾಗ್ ಗೆ ಅವಕಾಶ ನೀಡೋದೇ ಆಗಿತ್ತು. ಯಾಕಂದರೇ ರಾಯಲ್ಸ್ ಅಲ್ಪ ಮೊತ್ತಕ್ಕೆ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ ಕ್ರೀಜ್ ಗೆ ಬಂದ ಅಶ್ವಿನ್, ಶಿಮ್ರಾನ್ ಹಿಟ್ಮೆಯರ್ ಜೊತೆಗೆ ಸೇರಿಕೊಂಡರು ಅದ್ಭುತ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಚೇತರಿಕೆ ನೀಡಿದರು. ತಂಡ ಸೆಟಲ್ ಆದ ಬಳಿಕ ರಿಯಾನ್ ಗೆ ಅವಕಾಶ ನೀಡುವ ಉದ್ದೇಶದಿಂದ ಆಶ್ವಿನ್ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ರಿಟೈರ್ಡ್ ಔಟ್ ಎಂದರೆ ಅಂಪೈರ್ ಅನುಮತಿಯಿಲ್ಲದೆ ಪೆವಿಲಿಯನ್‌ಗೆ ಹೋಗುವುದು, ಆದರೆ ಮತ್ತೆ ಬ್ಯಾಟಿಂಗ್ ಗೆ ಬರುವಂತಿಲ್ಲ.
ಅದೇ ರೀತಿ ರಿಟೈರ್ಡ್ ಹರ್ಟ್ ಕೂಡ ಕ್ರಿಕೆಟ್ ನಲ್ಲಿದೆ. ಮೈದಾನದಲ್ಲಿ ಆಡುವಾಗ ಬ್ಯಾಟರ್ ಗಾಯಗೊಂಡರೇ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಗೆ ಹೋಗಬಹುದು. ಆಗ ಬ್ಯಾಟ್ಸ್‌ಮನ್ ಬ್ಯಾಟಿಂಗ್‌ಗೆ ಮರಳುವ ಸಾಧ್ಯತೆಯಿದೆ. ಅದು ಕೂಡ ಕೊನೆಯ ಬ್ಯಾಟರ್ ಆಗಿ ಕ್ರೀಸ್ ಗೆ ಬರಬಹುದು. ಅದೇ ರಿಟೈರ್ಡ್ ಔಟ್ ಆದ್ರೆ ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ.
ಆದರೆ, ಅಶ್ವಿನ್ ಈ ನಿರ್ಧಾರ ಏಕೆ ತೆಗೆದುಕೊಂಡರು ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಏಕೆಂದರೆ ಅವರು ರಿಟೈರ್ಡ್ ಔಟ್ ಆಗುವುದಕ್ಕೂ ಮೊದಲು ಉತ್ತಮವಾಗಿ ಬ್ಯಾಟಿಂಗ್ ಮುಂದುವರಿಸಿದ್ದರು. ಹೆಟ್ಮೈರ್ ಜೊತೆ ಉತ್ತಮ ಜೊತೆಯಾಟವೂ ಇತ್ತು. ಈ ಹಂತದಲ್ಲಿ ಅಶ್ವಿನ್ ಹೀಗೆ ಯಾಕ್ ಮಾಡಿದ್ರು ಅಂತಾ ಪ್ರಶ್ನಿಸಿದ್ದಾರೆ. ಜೊತೆಗೆ ಕೆಲವರು ಅಶ್ವಿನ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರೇ ಇನ್ನೂ ಕೆಲವರು ಟೀಕೆ ಮಾಡ್ತಿದ್ದಾರೆ.
ಅಂದಹಾಗೆ ಅಶ್ವಿನ್ ಟಿ 20 ಕ್ರಿಕೆಟ್ ನಲ್ಲಿ ಹೀಗೆ ರಿಟೈರ್ಡ್ ಔಟಾದ ನಾಲ್ಕನೇ ಬ್ಯಾಟರ್ ಆಗಿದ್ದಾರೆ. ashwin-becomes-1st-batter-dismissed-retired-out-ipl-history









