ಫಸ್ಟ್ ಟೆಸ್ಟ್ ಮ್ಯಾಚ್ | ಅಂಪರ್ ಜೊತೆ ಅಶ್ವಿನ್ ಜಗಳ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಅಂಪೈರ್ ನಿತಿನ್ ಮೆನನ್ ನಡುವೆ ಸಣ್ಣ ವಾಗ್ವಾದ ನಡೆದಿದೆ.
ಆಫ್ ಸ್ಪಿನ್ನರ್ ಅಶ್ವಿನ್ ಸಹಜವಾಗಿಯೇ ರೌಂಡಿ ದಿ ವಿಕೆಟ್ ಬೌಲ್ ಮಾಡುತ್ತಾರೆ. ಆದರೆ, ಇನಿಂಗ್ಸ್‍ನ 77ನೇ ಓವರ್‍ನಲ್ಲಿ ಅಶ್ವಿನ್ ಅವರ ಶೈಲಿಗೆ ವಿರುದ್ಧವಾಗಿ ಸ್ಟಂಪ್‍ಗೆ ಹತ್ತಿರ ಬೌಲ್ ಮಾಡಿದರು.
ಆದ್ರೆ ಓವರ್ ಮುಗಿದ ನಂತರ ಅಂಪೈರ್ ನಿತಿನ್ ಮೆನನ್ ಅಶ್ವಿನ್ ಅವರನ್ನು ಕರೆದು.. ನೀವು ವಿಕೆಟ್ ಗೆ ಹತ್ತಿರ ಹೋಗಿ ಬೌಲಿಂಗ್ ಮಾಡುವುದರಿಂದ ನನ್ನ ದೃಷ್ಠಿ ಕೇಂದ್ರಿಕರಿಸಲಾಗುತ್ತಿಲ್ಲ. ಎಲ್ ಬಿ ಕಾಲ್ಸ್ ಗೆ ಉತ್ತರಿಸಲಾಗುತ್ತಿಲ್ಲ ಎಂದರು.
ಇದನ್ನು ಕೇಳಿದ ಅಶ್ವಿನ್, ಹೇಗೋ ಎಲ್ ಬಿ ವಿಚಾರದಲ್ಲಿ ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ, ಮತ್ಯಾಕೆ ನಾನು ಬೌಲಿಂಗ್ ಶೈಲಿ ಬದಲಾಯಿಸಲಿ ಎಂದರು.
ಅಷ್ಟರಲ್ಲಿ ಅಲ್ಲಿಗೆ ತಲುಪಿದ ನಾಯಕ ರಹಾನೆ, ಅಶ್ವಿನ್ ಡೇಂಜರ್ ಜೋನ್‍ನಲ್ಲಿ (ಪಿಚ್‍ನಲ್ಲಿ) ಓಡುತ್ತಿದ್ದಾರಾ ಎಂದು ಕೇಳಿದರು.
ಸುಮಾರು ಮೂರು ಓವರ್‍ಗಳ ಕಾಲ ಅಶ್ವಿನ್ ಅಂಪೈರ್ ನಿತಿನ್ ಮೆನನ್‍ಗೆ ಬೌಲಿಂಗ್ ಮಾಡಿದರು.
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‍ನ 73ನೇ ಓವರ್‍ನಲ್ಲಿ ಎಲ್ ಬಿ ಬಲೆಯಿಂದ ಲಾಥಮ್ ಪಾರಾಗಿದ್ದರು. ಆ ಓವರ್‍ನಲ್ಲಿ ಅಶ್ವಿನ್ ಅವರ ಮೂರನೇ ಎಸೆತ ಲೆಗ್ ಸ್ಟಂಪ್‍ನ ದಿಕ್ಕಿಗೆ ಹೋಗಿ ಲಾಥಮ್ ಪ್ಯಾಡ್‍ಗೆ ಬಡಿಯಿತು.
ಆದರೆ, ಅಶ್ವಿನ್ ಮನವಿ ಮಾಡಿದಾಗ ನಿತಿನ್ ಮೆನನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಟೀಂ ಇಂಡಿಯಾ ಕೂಡ ರಿವ್ಯೂಗೆ ಹೋಗಲಿಲ್ಲ.
ಆದಾಗ್ಯೂ, ಮತ್ತೆ ರಿಪ್ಲೇ ನಲ್ಲಿ ಬಾಲ್ ಸ್ಟಂಪ್ ಗೆ ಬಡೆದಿತ್ತು. ಇದನ್ನು ನೋಡಿದ ಅಶ್ವಿನ್ ಕೋಪದಿಂದ ಕಾಲಿನಿಂದ ಒದ್ದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.









