‘ರಾಜೀವ್ ಗಾಂಧಿ ಖೇಲ್ ರತ್ನ’ಕ್ಕೆ ಅಶ್ವಿನ್, ಮಿಥಾಲಿ ಹೆಸರು ಶಿಫಾರಸು
ನವದೆಹಲಿ : ಪ್ರತಿಷ್ಠಿತ ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಗೆ ಟೀಂ ಇಂಡಿಯಾದ ಸ್ಪಿನ್ನರ್ ಆರ್.ಅಶ್ವಿನ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಈ ಇಬ್ಬರು ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಪ್ರತಿಷ್ಠಿತ ಪ್ರಶಸ್ತಿಗೆ ಇವರ ಹೆಸರುಗಳನ್ನು ಕಳುಹಿಸಿಕೊಟ್ಟಿದೆ.
ಆರ್.ಅಶ್ವಿನ್ ಭಾರತದ ಪರ 79 ಟೆಸ್ಟ್ ಪಂದ್ಯಗಳಲ್ಲಿ 2,685 ರನ್ ಸಿಡಿಸಿ, 413 ವಿಕೆಟ್ ಉರುಳಿಸಿದ್ದಾರೆ. 111 ಏಕದಿನ ಪಂದ್ಯಗಳಲ್ಲಿ 150 ವಿಕೆಟ್ ಗಳಿಸಿದ್ದು 675 ರನ್ ಸಾಧನೆ ಮಾಡಿದ್ದಾರೆ. ಇದ್ರ ಜೊತೆಗೆ 46 ಟಿ-20 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ.
ಇನ್ನು ಮಿಥಾಲಿ ರಾಜ್ 11 ಟೆಸ್ಟ್ ಪಂದ್ಯಗಳಲ್ಲಿ 669 ರನ್, 215 ಏಕದಿನ ಪಂದ್ಯಗಳಲ್ಲಿ 7,170 ರನ್, 89 ಟಿ20 ಪಂದ್ಯಗಳಲ್ಲಿ 2,364 ರನ್ ದಾಖಲೆ ಹೊಂದಿದ್ದಾರೆ.
ಇದಲ್ಲದೆ ‘ಅರ್ಜುನ್ ಪ್ರಶಸ್ತಿ’ಗಾಗಿ ಶಿಖರ್ ಧವನ್, ಕನ್ನಡಿಗ ಕೆ.ಎಲ್.ರಾಹುಲ್ ಸೇರಿದಂತೆ ಬೂಮ್ರಾ ಹೆಸರನ್ನು ಶಿಪಾರಸು ಮಾಡಲಾಗಿದೆ ಎಂದು ವರದಿಯಾಗಿದೆ.