ಐಪಿಎಲ್ ಟೂರ್ನಿಯಿಂದ ಹೊರ ನಡೆದ ಆರ್. ಅಶ್ವಿನ್

1 min read
R.Ashwin delhli capitals ipl 2021 saakshatv

ಐಪಿಎಲ್ ಟೂರ್ನಿಯಿಂದ ಹೊರ ನಡೆದ ಆರ್. ಅಶ್ವಿನ್

R.Ashwin delhli capitals ipl 2021 saakshatv14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರ ಆರ್. ಅಶ್ವಿನ್ ಹೊರ ನಡೆದಿದ್ದಾರೆ.
ತನ್ನ ಕುಟುಂಬದ ಸದಸ್ಯರು ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಆರ್. ಅಶ್ವಿನ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಿಂದ ನಾನು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬದ ಸದಸ್ಯರು ಕೋವಿಡ್ -19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಾನು ಅವರಿಗೆ ಸಹಾಯ ಮಾಡಬೇಕಿದೆ. ಕಠಿಣ ಸಮಯದಲ್ಲಿ ನನ್ನ ನೆರವು ಅವರಿಗೆ ಅಗತ್ಯವಿದೆ. ಹೀಗಾಗಿ ನಾನು ಟೂರ್ನಿಯಿಂದ ಹೊರನಡೆಯುತ್ತಿದ್ದೇನೆ. ಒಂದು ವೇಳೆ ಎಲ್ಲವೂ ಸರಿಯಾದ್ರೆ ನಾನು ಮತ್ತೆ ತಂಡವನ್ನು ಸೇರಿ ಟೂರ್ನಿಯಲ್ಲಿ ಆಡುತ್ತೇನೆ. ಥ್ಯಾಂಕ್ಯೂ ಡೆಲ್ಲಿ ಕ್ಯಾಪಿಟಲ್ಸ್ ಎಂದು ಆರ್. ಅಶ್ವಿನ್ ಟ್ವಿಟ್ ನಲ್ಲಿ ಹೇಳಿಕೊಂಡಿದ್ದಾರೆ.

Ashwin takes break from IPL as ‘family fighting COVID – 19

ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಸೂಪರ್ ಓವರ್ ನಲ್ಲಿ ಗೆಲುವು ದಾಖಲಿಸಿತ್ತು. ಈ ಗೆಲುವಿನ ನಂತರ ಆರ್. ಅಶ್ವಿನ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಆರ್. ಅಶ್ವಿನ್ ಅವರು, ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd