ಚಿತ್ರದುರ್ಗದಲ್ಲಿ ಎಎಸ್ ಐ ಆತ್ಮಹತ್ಯೆ Chitradurga saaksha tv
ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್ ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
50 ವರ್ಷದ ಗುರುಮೂರ್ತಿ ಮೃತ ಎಎಸ್‌ಐ ಆಗಿದ್ದಾರೆ. ಗುರುಮೂರ್ತಿ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪತ್ನಿಯ ಜೊತೆ ಜಗಳವಾಡಿದ್ದ ಗುರುಮೂರ್ತಿ ಅವರು ತೀವ್ರವಾಗಿ ಬೇಸರಗೊಂಡಿದ್ದರಂತೆ. ಕರ್ತವ್ಯಕ್ಕೂ ಹಾಜರಾಗಿರಲಿಲ್ಲವಂತೆ.
ಇದೀಗ ಚಿತ್ರದುರ್ಗ ತಾಲ್ಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಬೈಕ್ ಸಹ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.









