Asia cup | ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ
ಏಷ್ಯಾಕಪ್ 2022 ರ ಭಾಗವಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಅಂತರದೊಂದಿಗೆ ಸೋಲು ಕಂಡಿದೆ.
ಇದರೊಂದಿಗೆ ಪೈನಲ್ ಸೇರುವ ಅವಕಾಶಗಳನ್ನು ಭಾರತ ಕೈ ಬಿಟ್ಟಿದೆ. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಡಕೌಟ್ ಆಗಿದ್ದರು.
ಭಾರತ ಇನ್ನಿಂಗ್ಸ್ ನಲ್ಲಿ ಮಧುಶಂಕ ಮಾಡಿದ ಒಂದು ಅದ್ಭುತ ಎಸೆತಕ್ಕೆ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆದರು.
ಇದರೊಂದಿಗೆ ಏಷ್ಯಾಕಪ್ ನಲ್ಲಿ ಒಂದು ಕೆಟ್ಟ ದಾಖಲೆಯನ್ನು ವಿರಾಟ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ಏಷ್ಯಾಕಪ್ ಏಕದಿನ, ಟಿ 20 ಮಾದರಿಯಲ್ಲಿ ಡಕೌಟ್ ಆದ ಮೊದಲ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ನಿಂತಿದ್ದಾರೆ.
ಅಂದಹಾಗೆ ಈ ಪಂದ್ಯಕ್ಕೂ ಮುನ್ನ ಲೀಗ್ ಹಂತದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಳ್ಳೆಯ ಟಚ್ ನಲ್ಲಿ ಕಾಣಿಸಿಕೊಂಡಿದ್ದರು.
ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚೂರಿಗಳನ್ನು ಸಿಡಿಸಿ ಮಿಂಚಿದ್ದರು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕ್ ಔಟ್ ಆಗಿದ್ದು, ಅಭಿಮಾನಿಗಳಿಗೆ ನಿರಾಸೆ ಅನುಭವಿಸುವಂತೆ ಆಗಿದೆ.
ಇನ್ನು ಪಂದ್ಯ ವಿಚಾರಕ್ಕೆ ಬಂದರೇ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು.
ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಭಾರತದ ಪರ ರೋಹಿತ್ ಶರ್ಮಾ 72 ರನ್ ಗಳಿಸಿದರು.
ಈ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಜಯ ಸಾಧಿಸಿತು.