ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ ವೈರಸ್ ಕುರಿತಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ, ಶ್ವೇತಭವನದಿಂದ ತೆರಳಿದ ಘಟನೆ ನಡೆದಿದೆ.
ಅಮೆರಿಕದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ ನ್ಯೂಸ್‌ನ ವರದಿಗಾರ್ತಿಯೊಬ್ಬಳು ಕೇಳಿದ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದು, ಕೊರೋನಾ ವೈರಸ್ ಕಾರಣದಿಂದಲೇ ಎಲ್ಲಾ ಕಡೆ ಜನ ಸಾಯುತ್ತಿದ್ದಾರೆ. ಇಂತಹ ಪ್ರಶ್ನೆಯನ್ನು ನನ್ನ ಬಳಿ ಕೇಳಬೇಡಿ. ನೀವು ಚೀನಾದ ಬಳಿ ಈ ರೀತಿಯ ಪ್ರಶ್ನೆ ಕೇಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಸಿಬಿಎಸ್ ನ್ಯೂಸ್‌ನ ವರದಿಗಾರ್ತಿ ‘ಸರ್, ನೀವು ನನಗೇಕೆ ಇದನ್ನು ಹೇಳುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಧ್ಯಕ್ಷ ಟ್ರಂಪ್ ‘ನನಗೆ ಕಿರಿಕಿರಿ ಉಂಟುಮಾಡುವ ಪ್ರಶ್ನೆಯನ್ನು ನೀವು ಕೇಳುತ್ತೀದ್ದಿರಿ. ನನಗೆ ಕಿರಿಕಿರಿ ಉಂಟುಮಾಡುವ ಯಾರೇ ಆಗಲಿ ಅವರಿಗೆ ನನ್ನ ಉತ್ತರ ಹೀಗೆಯೇ ಇರಲಿದೆ’ ಎಂದು ಪ್ರತಿಕ್ರಿಯಿಸಿ, ಇನ್ನೊಬ್ಬ ವರದಿಗಾರ್ತಿಗೆ ಪ್ರಶ್ನೆ ಕೇಳಲು ಸೂಚಿಸಿದ್ದಾರೆ. ಆಗ ಸಿಬಿಎಸ್ ನ್ಯೂಸ್‌ನ ವರದಿಗಾರ್ತಿ ವೀಜಿಯಾ ಜಿಯಾಂಗ್ ತಮ್ಮ ಪ್ರಶ್ನೆಗೆ ಉತ್ತರಿಸುವಂತೆ ಮತ್ತೆ ಮತ್ತೆ ಕೇಳಿದ್ದು, ಇದರಿಂದ ಕೋಪೋದ್ರಿಕ್ತರಾದ ಅಮೆರಿಕ ಅಧ್ಯಕ್ಷ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಅಲ್ಲಿಂದ ತೆರಳಿದರು.
ಕೊರೋನಾ ಸೋಂಕಿನ ರುದ್ರ ತಾಂಡವಕ್ಕೆ ಅಮೆರಿಕ ಅಕ್ಷರಶಃ ನಲುಗಿ ಹೋಗಿದ್ದು, ಕೊರೊನಾ ಸೋಂಕಿನ ಸಾವಿನ ಸಂಖ್ಯೆ ಲಕ್ಷದ ಗಡಿ ದಾಟುವ ಲಕ್ಷಣಗಳು ಕಾಣಿಸುತ್ತಿದೆ. ಕೊರೋನಾ ಸೋಂಕಿನ ಹೊಡೆತಕ್ಕೆ ಹತಾಶವಾಗಿರುವ ಅಮೆರಿಕ ನಿರಂತರ ಪ್ರಯತ್ನದ ನಂತರವೂ ಸೋಂಕು ಹರಡುವುದನ್ನು ತಡೆಗಟ್ಟಲು ವಿಫಲವಾಗಿದೆ.
ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!
ಈ ವಾರ ಭವಿಷ್ಯ - 09.08.2026 - 15.08.2026 ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...








