Assam : ಮದುವೆಯಾಗಲು ನಿರಾಕರಿಸಿದ ಗೆಳತಿ; ಫೇಸ್ ಬುಕ್ ಲೈವ್ ಬಂದು ಯುವಕ ಆತ್ಮಹತ್ಯೆ….
ತಾನು ಪ್ರೀತಿಸುತ್ತಿದ್ದ ಗೆಳತಿ ಮದುವೆಯಾಗಲು ನಿರಾಕರಿಸಿದ್ದಕ್ಕೆ 27 ವರ್ಷದ ಯವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ಸಿಲ್ಚಾರ್ ನಲ್ಲಿ ನಡೆದಿದೆ. ಫೆಸ್ ಬುಕ್ ಲೈವ್ ಕಾಸ್ಸ್ಟಿಂಗ್ ಮಾಡುತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವ್ಯಕ್ತಿಯನ್ನ ಜಯದೀಪ್ ರಾಯ್ ಎಂದು ಗುರುತಿಸಲಾಗಿದೆ. ಅವರು ಮೆಡಿಕಲ್ ಸೇಲ್ಸ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೇಸ್ ಬುಕ್ ಲೈವ್ ನಲ್ಲಿ ಮನೆಯವರ ಒತ್ತಡದಿಂದ ಯುವತಿ ಮದುವೆಯಾಗದಿರಲು ನಿರ್ಧಾರ ಕೈಗೊಂಡಿದ್ದಾಳೆ ಎಂದು ಯುವಕ ಹೇಳಿದ್ದಾನೆ. ಮೃತನ ಕುಟುಂಬ ಯಾವುದೇ ದೂರು ದಾಖಲಿಸದಿದ್ದರೂ ಈಗ ಯುವತಿಯ ಕಟುಂಬದವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.
ಜಯದೀಪ್ ರಾಯ್ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಕುಟುಂಬ ಸಹ ಹತ್ತಿರದ ಕಲಾಯಿನ್ ನಲ್ಲಿ ವಾಸ ಮಾಡುತ್ತಿತ್ತು.
“ನಾನು ಮದುವೆಯ ಪ್ರಸ್ತಾಪವನ್ನ ಕಳುಹಿಸಿದೆ, ಆದರೆ ಅವಳು ಎಲ್ಲರ ಮುಂದೆ ಪ್ರಸ್ತಾಪವನ್ನ ನಿರಾಕರಿಸಿದಳು ನಮ್ಮಿಬ್ಬರ ಕಾರಣದಿಂದಾಗಿ ಹುಡುಗಿಯನ್ನ ಕೊಲ್ಲುವುದಾಗಿ ಆನಂತರ ಯುವತಿಯ ಚಿಕ್ಕಪ್ಪ ಬಂದು ನಮ್ಮ ಬಳಿ ಹೇಳಿದ. ನಾನು ಈ ಪ್ರಪಂಚವನ್ನ ತೊರೆಯುತ್ತಿದ್ದೇನೆ ಏಕೆಂದರೆ ನನ್ನನ್ನಿಂದಾಗಿ ಅವಳು ಬಳಲುತ್ತಿದ್ದಾಳೆ ಎಂದು ಫೇಸ್ ಬುಕ್ ಲೈವ್ ನಲ್ಲಿ ಯುವಕ ಹೇಳಿದ್ದಾನೆ. ಇದಕ್ಕೂ ಮೊದಲು ತನ್ನ ಜೀವನವನ್ನ ಕೊನೆಗೊಳಿಸಿಕೊಂಡಿದ್ದಕ್ಕಾಗಿ ತನ್ನ ತಾಯಿ ಮತ್ತು ಇತರ ಕುಟುಂಬ ಸದಸ್ಯರಲ್ಲಿ ಕ್ಷಮೆಯಾಚಿಸಿದನು. ತನ್ನ ಕುಟುಂಬಕ್ಕಿಂತ ಹೆಚ್ಚಾಗಿ ತನ್ನ ಗೆಳತಿಯನ್ನು ಪ್ರೀತಿಸುತ್ತೇನೆ ಮತ್ತು ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ರಾಯ್ ಹೇಳಿದ್ದಾನೆ.
ಇದೀಗ ಪೊಲೀಸರು ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
Assam: 27-Year-old ends life during Facebook live as his girlfriend refuses to marry him