ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಯವ ನಟ ಕೋವಿಡ್ ನಿಂದ ಮೃತ…..
ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟನಿಗೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿರುವ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಅಸ್ಸಾಂನ ಖ್ಯಾತ ನಟ ಕಿಶೋರ್ ದಾಸ್ ಅವರು ಕೊರೋನಾದಿಂದ ವಿಧಿವಶರಾಗಿದ್ದಾರೆ.
ಅಸ್ಸಾಂನಲ್ಲಿ ಕಿಶೋರ್ ಸಾವು ಸಂಚಲನ ಮೂಡಿಸಿದೆ. ಕಿಶೋರ್ 30 ವರ್ಷ ತುಂಬುವ ಮುನ್ನವೇ ಸಾವನ್ನಪ್ಪಿದ್ದನ್ನು ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಕೋವಿಡ್ ಪ್ರೋಟೋಕಾಲ್ ಪ್ರಕಾರ ಅವರ ಅಂತಿಮ ಸಂಸ್ಕಾರ ಚೆನ್ನೈನಲ್ಲಿ ನಡೆಯಲಿದೆ.
ಚೆನ್ನೈನ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 30 ವಯಸ್ಸಿನ ಶೋರ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅಸ್ಸಾಂನ ಖ್ಯಾತ ನಟನಾಗಿದ್ದ ಕಿಶೋರ್ಗೆ ಸಾಕಷ್ಟು ಸಿನಿಮಾಗಳ ಅವಕಾಶವಿತ್ತು. ಇತ್ತಿಚೆಗೆ ತಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಫೋಟೋ ಸಹಿತ ಪೋಸ್ಟ್ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿದೆ.
ಕಿಶೋರ್ ದಾಸ್ ಅವರ ನಿಧನದ ಸುದ್ದಿ ತಿಳಿದ ಅಭಿಮಾನಿಗಳು ಮತ್ತು ಅನೇಕ ನಟರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಿಶೋರ್ ದಾಸ್ ನಿಧನಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.