ವಾಷಿಂಗ್ಟನ್: ಅಮೆರಿಕದಲ್ಲಿ ರೆಸ್ಟೋರೆಂಟ್ ಹತ್ತಿರ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭಾರತೀಯ ಮೂಲದ ವಿವೇಕ್ ತನೇಜಾ (41) ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದ್ದು, ವರ್ಜೀನಿಯಾ ಮೂಲದ ತನೇಜಾ ಡೈನಮೋ ಟೆಕ್ನಾಲಜೀಸ್ನ ಸಹ-ಸಂಸ್ಥಾಪಕರಾಗಿದ್ದರು. ಈ ವ್ಯಕ್ತಿ ಕೊಲೆಯಾದ ದಿನ ವಾಷಿಂಗ್ಟ್ ನಲ್ಲಿರುವ ರೆಸ್ಟೋರೆಂಟ್ ಗೆ ತೆರಳಿದ್ದರು.
ಅಮೆರಿಕದಲ್ಲಿ ಜಾಪನೀಸ್ ಸಹೋದರಿಯರು ನಡೆಸುವ ರೆಸ್ಟೋರೆಂಟ್ನಲ್ಲಿ ಇದ್ದರು. ಶಂಕಿತ ವ್ಯಕ್ತಿ ಸಹ ಅಲ್ಲಿಯೇ ಇದ್ದ. ಮಧ್ಯರಾತ್ರಿ ರೆಸ್ಟೋರೆಂಟ್ ನಿಂದ ಹೋಗಿದ್ದಾರೆ. ನಂತರ ರಸ್ತೆಯಲ್ಲಿ ಜಗಳ ಆರಂಭವಾಗಿದೆ. ಸರಿಯಾದ ಸಮಯ ನೋಡಿ ಆರೋಪಿ ವಿವೇಕ್ ಅವರನ್ನು ನೆಲಕ್ಕೆ ಹಾಕಿದ್ದಾನೆ. ಗಂಭೀರವಾಗಿ ಹಲ್ಲೆ ನಡೆಸಿ, ವಿವೇಕ್ ನನ್ನು ಅಲ್ಲಿಯೇ ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ. ಕೂಡಲೇ ಪೊಲೀಸರು ಸ್ಥಳ ತೆರಳಿದ್ದರು. ಆದರೆ ಅಷ್ಟರಲ್ಲಿಯೇ ವಿವೇಕ್ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ.