Kerala Assembly Election Results: ಕೇರಳದಲ್ಲಿ ಎಲ್ ಡಿಎಫ್ ಹೊಸ ಇತಿಹಾಸ..? Kerala
ತಿರುವನಂತಪುರಂ : ಕೇರಳದಲ್ಲಿ ಪಿಣರಾಯ್ ವಿಜಯನ್ ನೇತೃತ್ವದ ಎಲ್ ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸುವತ್ತ ದಾಪುಗಾಲಿಟ್ಟಿದೆ.
140 ಸ್ಥಾನಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 71 ಮ್ಯಾಜಿಕ್ ನಂಬರ್ ಬೇಕಾಗಿದೆ. ಸದ್ಯದ ಟ್ರೆಂಡ್ ಪ್ರಕಾರ ಕೇರಳದಲ್ಲಿ ಎರಡನೇ ಬಾರಿಗೆ ಎಲ್ ಡಿಎಫ್ ಆಡಳಿತಕ್ಕೆ ಏರುವ ಮುನ್ಸೂಚನೆ ನೀಡಿದೆ. ಸದ್ಯದ ಮತಎಣಿಕೆಯಲ್ಲಿ ಎಲ್ ಡಿಎಫ್ 76 ಸ್ಥಾನಗಳಲ್ಲಿ, ಯುಡಿಎಫ್ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಟ್ರೆಂಡ್ ಹೀಗೆ ಮುಂದುವರೆದರೇ ಎಲ್ ಡಿಎಫ್ ಮೈತ್ರಿಕೂಟ ಮತ್ತೊಮ್ಮೆ ಪೂರ್ಣಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಲಿದೆ. ಅಷ್ಟೇ ಅಲ್ಲ 1980ರ ದಶಕದಿಂದ ಕೇರಳ ರಾಜಕೀಯದಲ್ಲಿ ಒಮ್ಮೆ ಎಲ್ ಡಿಎಫ್, ಒಮ್ಮೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಮತದಾರರ ಎಲ್ ಡಿಎಫ್ ಗೆ ಎರಡನೇ ಅವಧಿಗೆ ಕೈಹಿಡಿಯುವ ಸಾಧ್ಯತೆಗಳಿವೆ.