ADVERTISEMENT
Thursday, September 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಹಲವಾರು ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ ಜ್ಯೋತಿಷಿ ಕೊರೊನಾಗೆ ಬಲಿ ?

admin by admin
May 30, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹಲವಾರು ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ ಜ್ಯೋತಿಷಿ ಕೊರೊನಾಗೆ ಬಲಿ ?

ಅಹಮದಾಬಾದ್, ಮೇ 30: ಹಲವಾರು ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ ಸಹಸ್ರಮಾನದ ಜ್ಯೋತಿಷಿ ಎಂದೇ ಖ್ಯಾತಿ ಗಳಿಸಿದ ಬೇಜಾನ್ ದಾರುವಾಲ್ಲ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

Related posts

ಭಾರತ ದೇಶ ಯಾರಪ್ಪನ ಮನೆ ಆಸ್ತಿಯೂ ಅಲ್ಲ: ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವ ವಿಕೃತ ಸಂಸ್ಕೃತಿ ಬಿಜೆಪಿಯದ್ದು ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಭಾರತ ದೇಶ ಯಾರಪ್ಪನ ಮನೆ ಆಸ್ತಿಯೂ ಅಲ್ಲ: ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವ ವಿಕೃತ ಸಂಸ್ಕೃತಿ ಬಿಜೆಪಿಯದ್ದು ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

September 10, 2026
ವಂದೇ ಮಾತರಂ ವಿವಾದ: ಅಬ್ದುಲ್ಲಾ ಜೋಡಿ ಗೌರವ, ಕಾಂಗ್ರೆಸ್ ಆಕ್ಷೇಪ — ಬಿಜೆಪಿ ವಾಗ್ದಾಳಿ

ವಂದೇ ಮಾತರಂ ವಿವಾದ: ಅಬ್ದುಲ್ಲಾ ಜೋಡಿ ಗೌರವ, ಕಾಂಗ್ರೆಸ್ ಆಕ್ಷೇಪ — ಬಿಜೆಪಿ ವಾಗ್ದಾಳಿ

September 10, 2026

90 ವರ್ಷದ ಜ್ಯೋತಿಷಿ ಬೆಜಾನ್ ದಾರುವಾಲ್ಲ ಅವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುಜರಾತ್ ನ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಬೆಜಾನ್ ದಾರುವಾಲ್ಲ ಅವರು ನ್ಯೂಮೋನಿಯಾ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ವಾರ ಅವರ ಆರೋಗ್ಯ ಹದಗೆಟ್ಟಿತು. ಹಾಗಾಗಿ ಅವರ ಕುಟುಂಬ ಸದಸ್ಯರು ಅಹಮದಾಬಾದ್ ನ ಗಾಂಧೀನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಈ ವೇಳೆ ಅವರಿಗೆ ಕೊರೋನಾ ವೈರಸ್ ತಗುಲಿರುವುದು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.‌
ಆದರೆ ಅವರ ಕುಟುಂಬ ಸದಸ್ಯರು ‌ಇದನ್ನು ಅಲ್ಲಗಳೆದಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪ್ರಕಟಿಸಿರುವ ಕೊರೋನಾ ವೈರಸ್ ಪ್ರಕರಣಗಳ ಪಟ್ಟಿ ಯಲ್ಲಿ ಬೆಜಾನ್ ದಾರುವಾಲ್ಲ ಅವರ ಹೆಸರು ಕೂಡ ದಾಖಲಾಗಿದೆ. ‌ಬೆಜಾನ್ ದಾರುವಾಲ್ಲ ಅವರ ಪುತ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದು ವೈದ್ಯರ ವರದಿ ಬಂದ ಬಳಿಕ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

ಗಣೇಶನ ಭಕ್ತರಾಗಿದ್ದ ಜ್ಯೋತಿಷಿ ಬೆಜಾನ್ ದಾರುವಾಲ್ಲ ಗಣೇಶ್ ಸ್ಪೀಕ್ಸ್. ಕಾಂ ಮೂಲಕ ಅಸಂಖ್ಯಾತ‌‌ ಓದುಗರನ್ನು ಗಳಿಸಿದ್ದರು. ‌ ಅನೇಕ ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ‌ ಜ್ಯೋತಿಷಿ ಬೆಜಾನ್ ದಾರುವಾಲ್ಲ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವರ್ಷಗಳ ಮೊದಲೇ ಭವಿಷ್ಯ ನುಡಿದಿದ್ದರು.‌ ಅಷ್ಟೇ ಅಲ್ಲ ಸಂಜಯ್ ಗಾಂಧಿ ಅಪಘಾತ, ಇಂದಿರಾ ಗಾಂಧಿ ಹತ್ಯೆ, ಗುಜರಾತ್ ಭೂಕಂಪ, ಅಮಿತಾಬ್ ಬಚ್ಚನ್‌ ಸಿನಿ ಕೆರಿಯರ್ ಬಗ್ಗೆಯೂ ಭವಿಷ್ಯ ನುಡಿದಿದ್ದರು.

ಎಪ್ರಿಲ್ ತಿಂಗಳ ‌ಪ್ರಾರಂಭದಲ್ಲಿಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಲಿದೆ ಎಂದು ಭವಿಷ್ಯ ನುಡಿದಿದ್ದ ಬೆಜಾನ್ ದಾರುವಾಲ್ಲ ಕೊರೊನಾದಿಂದಾಗಿ ‌ಭಾರತದಲ್ಲಿ ಅರ್ಥಿಕ ಬಿಕ್ಕಟ್ಟಿನ ಸಮಸ್ಯೆ ಹೆಚ್ಚಾಗಲಿದೆ ಎಂದು ‌ಎಚ್ಚರಿಸಿದ್ದರು. ಆದರೆ ಭಾರತ ಶೀಘ್ರದಲ್ಲೇ ಫೀನಿಕ್ಸ್‌ನಂತೆ ಕೊರೊನಾ ವೈರಸ್ ವಿರುದ್ಧ ಎದ್ದು ನಿಲ್ಲಲಿದೆ, ಭಾರತಕ್ಕೆ 2020 ಉತ್ತಮ ವರ್ಷವಲ್ಲ‌ ಆದರೆ 2021 ಅತ್ಯುತ್ತಮ ವರ್ಷವಾಗಿದ್ದು ವಿಶ್ವದಲ್ಲೇ ಭಾರತ ಸೂಪರ್ ಪವರ್ ದೇಶವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದರು.

ದಾರುವಲ್ಲಾ ಅವರ ಆತ್ಮೀಯ ಗೆಳೆಯ ಬೆಹ್ರಮ್ ಮೆಹ್ತ ಅವರು ಬೆಜಾನ್ ದಾರುವಾಲ್ಲ ನಿಧನಕ್ಕೆ ಸಂತಾಪ ಸೂಚಿಸಿದ್ದು, ನಾನು ವಿಧಿವಶನಾದಾಗ‌ ನನಗೆ ಅತ್ಯುತ್ತಮ ವಿದಾಯ ಕೋರಬೇಕು‌ ಎಂದು ಅವರ ಅಂತಿಮ ಆಸೆಯನ್ನು ಹಲವಾರು ಬಾರಿ ನನ್ನಲ್ಲಿ ಹೇಳಿಕೊಂಡಿದ್ದರು. ‌ಆದರೆ ಕೊರೊನಾ ವೈರಸ್ ನಿಂದಾಗಿ ಅವರ ಕೊನೆಯ ಆಸೆಯನ್ನು ಈಡೇರಿಸಲು ‌ಸಾಧ್ಯವಾಗುತ್ತಿಲ್ಲ‌ ಎಂಬ‌ ಕೊರಗು ಕಾಡುತ್ತಿದೆ ಎಂದು ಹೇಳಿದ್ದಾರೆ. ಗಣೇಶ್ ಸ್ಪೀಕ್ಸ್ .ಕಾಂ ಸಂಸ್ಥಾಪಕ ಹೇಮಂಗ್ ಪಂಡಿತ್ ಮಾತನಾಡಿ ಬೆಜಾನ್ ದಾರುವಲ್ಲ ಅವರು ಇನ್ನಿಲ್ಲ ಎಂಬ ವಾರ್ತೆಯನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಅವರ ಸ್ಥಾನ ಯಾರಿಂದಲೂ ‌ತುಂಬಲು ಸಾಧ್ಯವಿಲ್ಲ ‌ಎಂದು ಹೇಳಿದ್ದಾರೆ.

ಬೆಜಾನ್ ದಾರುವಲ್ಲ ಅವರು ಭಾರತ ನಿರ್ಮಾಣ್ ಸಹಸ್ರಮಾನದ ಜ್ಯೋತಿಷಿ ಪ್ರಶಸ್ತಿ, ಭಾರತೀಯ ಜ್ಯೋತಿಷಿ ಫೆಡರೇಶನ್‌ನಿಂದ ಮಹಾಮಹೋಪಾಧ್ಯಾಯ ಪ್ರಶಸ್ತಿ, ರಷ್ಯಾ ಅಸ್ಟ್ರಾಲಜಿ ಸೊಸೈಟಿಯಿಂದ ಅತ್ಯುತ್ತಮ ಜ್ಯೋತಿಷಿ, ಉತ್ತರಖಂಡ ಮುಖ್ಯಮಂತ್ರಿಯಿಂದ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ನೋಬೆಲ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ShareTweetSendShare
Join us on:

Related Posts

ಭಾರತ ದೇಶ ಯಾರಪ್ಪನ ಮನೆ ಆಸ್ತಿಯೂ ಅಲ್ಲ: ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವ ವಿಕೃತ ಸಂಸ್ಕೃತಿ ಬಿಜೆಪಿಯದ್ದು ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಭಾರತ ದೇಶ ಯಾರಪ್ಪನ ಮನೆ ಆಸ್ತಿಯೂ ಅಲ್ಲ: ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವ ವಿಕೃತ ಸಂಸ್ಕೃತಿ ಬಿಜೆಪಿಯದ್ದು ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

by Shwetha
September 10, 2026
0

ಬೆಂಗಳೂರು: ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾದ ಭಾರತ್ ಜೋಡೋ ಯಾತ್ರೆಯ ಐದನೇ ವರ್ಷಾಚರಣೆಯ ಸಂದರ್ಭದಲ್ಲಿ ಕೆಪಿಸಿಸಿ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರು ಕೇಂದ್ರದ ಬಿಜೆಪಿ ಸರ್ಕಾರದ...

ವಂದೇ ಮಾತರಂ ವಿವಾದ: ಅಬ್ದುಲ್ಲಾ ಜೋಡಿ ಗೌರವ, ಕಾಂಗ್ರೆಸ್ ಆಕ್ಷೇಪ — ಬಿಜೆಪಿ ವಾಗ್ದಾಳಿ

ವಂದೇ ಮಾತರಂ ವಿವಾದ: ಅಬ್ದುಲ್ಲಾ ಜೋಡಿ ಗೌರವ, ಕಾಂಗ್ರೆಸ್ ಆಕ್ಷೇಪ — ಬಿಜೆಪಿ ವಾಗ್ದಾಳಿ

by Shwetha
September 10, 2026
0

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ನುಡಿಸಿದ ವಿಚಾರ ಇದೀಗ ರಾಷ್ಟ್ರ ರಾಜಕಾರಣದಲ್ಲಿ...

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ: ಸತತ ಮೂರು ಗಂಟೆಗಳಿಗಿಂತ ಹೆಚ್ಚಿನ ಶೋಧ, ವಿಚಾರಣೆ

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ: ಸತತ ಮೂರು ಗಂಟೆಗಳಿಗಿಂತ ಹೆಚ್ಚಿನ ಶೋಧ, ವಿಚಾರಣೆ

by Shwetha
September 10, 2026
0

ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದು, ಸತತ ಮೂರು ಗಂಟೆಗಳಿಗಿಂತ ಹೆಚ್ಚು...

ಬಿಬಿ ಕೆ 13- ಪತ್ರ ಎನ್ನಲು ಬರದೆ ಪತರ ಎಂದ ಸ್ಪರ್ಧಿ:ಸರಳ ಕನ್ನಡ ಓದಲು ಲಿಖಿತ್ ಹರಸಾಹಸ, ಕನ್ನಡ ರಿಯಾಲಿಟಿ ಶೋನಲ್ಲಿ ಕನ್ನಡವೇ ಬರಲ್ವಾ? ಲಿಖಿತ್ ತಡಬಡಾಯಿಸಿದ್ದಕ್ಕೆ ವೀಕ್ಷಕರು ಫುಲ್ ಗರಂ

ಬಿಬಿ ಕೆ 13- ಪತ್ರ ಎನ್ನಲು ಬರದೆ ಪತರ ಎಂದ ಸ್ಪರ್ಧಿ:ಸರಳ ಕನ್ನಡ ಓದಲು ಲಿಖಿತ್ ಹರಸಾಹಸ, ಕನ್ನಡ ರಿಯಾಲಿಟಿ ಶೋನಲ್ಲಿ ಕನ್ನಡವೇ ಬರಲ್ವಾ? ಲಿಖಿತ್ ತಡಬಡಾಯಿಸಿದ್ದಕ್ಕೆ ವೀಕ್ಷಕರು ಫುಲ್ ಗರಂ

by Shwetha
September 10, 2026
0

ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13 ಇದೀಗ ಆರಂಭದ ದಿನಗಳಲ್ಲೇ ಹೈಡ್ರಾಮಾ ಮತ್ತು ಕುತೂಹಲಕಾರಿ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಮನೆಯೊಳಗೆ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ಜಾರಕಿಹೊಳಿ ಮೇಲಿನ ಇಡಿ ದಾಳಿ ಕೇಂದ್ರದ ರಾಜಕೀಯ ಷಡ್ಯಂತ್ರ-ತನಿಖಾ ಸಂಸ್ಥೆಗಳು ಬಿಜೆಪಿ ಪಾಲಿನ ವಾಷಿಂಗ್ ಮೆಷಿನ್: ಕೇಂದ್ರ ಸರ್ಕಾರದ ವಿರುದ್ಧ ಹರಿಪ್ರಸಾದ್ ಕೆಂಡಾಮಂಡಲ

by Shwetha
September 10, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ದಾಳಿಗಳು ಈಗ ಹೊಸ ಸಂಚಲನ ಮೂಡಿಸಿವೆ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram