Tuesday, February 7, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology : ಕಾಳಸರ್ಪ ‘ಯೋಗಾಯೋಗ…!!!

Namratha Rao by Namratha Rao
December 30, 2022
in Astrology, News, Newsbeat, ಜ್ಯೋತಿಷ್ಯ
Astrology
Share on FacebookShare on TwitterShare on WhatsappShare on Telegram

Astrology : ಕಾಳಸರ್ಪ ‘ಯೋಗಾಯೋಗ…!!!

ಜಾತಕದಲ್ಲಿರೋ ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಕಾಲ ಎಂದರೆ ಸಾವು. ಸರ್ಪ ಎಂದರೆ ಹಾವು. ಕಾಲವನ್ನು ಸಮಯ ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ. ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳ ಬಹುದು. ಭಯಪೀಡಿತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗ್ತಾನೆ, ಇನ್ನಿಲ್ಲದ ತೊಂದರೆಗೆ ಸಿಕ್ಕಿ ಹಾಕೊಳ್ತಾನೇ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂಬೋಣ. ಮನೋವಿಜ್ಞಾನಿಗಳು ಈ ಅಂಶವನ್ನೇ ಹೇಳ್ತಾರೆ. ಎಲ್ಲಿಯವರೆಗೆ ನೀವು ಭಯಪೀಡಿತರಾಗಿರ್ತೀರೋ ಅಲ್ಲಿಯವರೆಗೆ ರೋಗಗಳು ನಿಮ್ಮನ್ನು ಕಾಡುತ್ತವೆ ಅಂತ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳೋದಾದ್ರೆ ಕಾಳಸರ್ಪ ಯೋಗ ಅನ್ನೋದು ಮನಸ್ಸಿನ ಭೀತಿಗೆ ಸಂಬಂಧಿಸಿದ್ದು.

Related posts

Bihar Railway Track

Bihar : ಮೊಬೈಲ್ ಟವರ್ ಬಳಿಕ, 2 ಕಿ.ಮೀ ರೈಲ್ವೆ ಹಳಿಯನ್ನೇ ಕದ್ದ ಕಳ್ಳರು…. 

February 7, 2023
Rama Sitha

Astrology : ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ… 

February 6, 2023

ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಹಾಗಾಗಿ ಜಾತಕದಲ್ಲಿ ರಾಹು ಇರುವ ಸ್ಥಾನವನ್ನು ಸರ್ಪದ ಶಿರೋಭಾಗವೆಂತಲೂ, ಕೇತುವಿನ ಸ್ಥಾನವನ್ನು ಸರ್ಪದ ಬಾಲದ ತುದಿಗೂ ಹೋಲಿಸುತ್ತಾರೆ. ಸರ್ಪದ ತಲೆ ಮತ್ತು ಬಾಲದ ನಡುವೆ ಇನ್ನುಳಿದ ಗ್ರಹಗಳು (ರವಿ, ಸೋಮ, ಕುಜ, ಶುಕ್ರ, ಬುಧ, ಗುರು, ಶನಿ) ಇದ್ದರೆ ಆ ಯೋಗವನ್ನು ಕಾಳಸರ್ಪ ಯೋಗವೆನ್ನುತ್ತಾರೆ. ಅಂತಹ ಯೋಗದಲ್ಲಿ ಜನಿಸಿದವರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆಯಿದೆ. ಕೆಲವರಂತೂ ಕಾಳಸರ್ಪ ಯೋಗವನ್ನು ದೋಷಕ್ಕೆ ಹೋಲಿಸುತ್ತಾರೆ. ಕಾಳಸರ್ಪ ದೋಷದಿಂದ ವಿಮುಕ್ತಿ ಹೊಂದಲು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಬೇಕೆಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಕಾಳಸರ್ಪ ದೋಷ ಪರಿಹಾರಕ್ಕಾಗಿ ಕಾಳಸರ್ಪ ಯಂತ್ರವನ್ನು ಮನೆಯೊಳಗಿಟ್ಟು ಪೂಜಿಸುವುದುಂಟು. ಅದರಿಂದಾಗಿ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎನ್ನುವ ನಂಬಿಕೆಯಿದೆ.

ಆದರೆ ಗ್ರಹಗಳ ಚಲನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಜಾತಕನ ಗ್ರಹಕೂಟದಲ್ಲಿ ರಾಹು, ಕೇತುಗಳ ಸ್ಥಾನದಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಹಾಗಾಗಿ ಕಾಳಸರ್ಪ ದೋಷವಿದ್ದರೂ ಮನುಷ್ಯನ ಸ್ವಭಾವದ ಮೇಲಾಗುವ ಪರಿಣಾಮಗಳು ಬೇರೆಯಾಗೇ ಇರುತ್ತವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೊಮ್ಮೆ ನಿಮ್ಮ ಜಾತಕದಲ್ಲಿ ಕಾಳಸರ್ಪ ಯೋಗವಿದ್ರೂ ಹೆದರಿಕೊಳ್ಳೋ ಅವಶ್ಯಕತೆ ಇಲ್ಲ.

ಜನ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ಸ್ಥಾನಕ್ಕೆ ಅನುಗುಣವಾಗಿ ಕಾಳಸರ್ಪ ಯೋಗವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅದರ ಆಧಾರದ ಮೇಲೆ ಜ್ಯೋತಿಷಿಗಳು ಜಾತಕನ ಫಲವನ್ನು ಹೇಳುತ್ತಾರೆ. ಏಳು ಬಗೆಯ ಕಾಳಸರ್ಪ ಯೋಗಗಳೆಂದರೆ, ಅನಂತ, ಕಾಳಿಕಾ, ವಾಸುಕಿ, ಶಂಖಪಾಲ, ಪದ್ಮ, ಮಹಾಪದ್ಮ ಮತ್ತು ತಕ್ಷ ಕ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ ರಾಹು ಸಂಬಂಧಿತ ಆಹಾರ ಅಂದರೆ ಉದ್ದು. ಅದರ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಶರೀರದಲ್ಲಿ ಟಾಕ್ಸಿಕ್‌ಅಂಶ ಹೆಚ್ಚುತ್ತದೆ. ವಾತದೋಷ ಉಂಟಾಗುತ್ತದೆ. ದೋಷದ ಕಾರಣ ವಾಯು ನೋವು ಮತ್ತಿತರ ಸಮಸ್ಯೆಗಳು ಕಾಣಬಹುದು. ಆ ಕಾರಣ ಮನೋ ನಿಯಂತ್ರಣ ಮಾಡಿಕೊಳ್ಳಬೇಕು.ಧ್ಯಾನ, ಪ್ರಾಣಾಯಾಮ ಕ್ರಿಯೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು. ಆಗ ಕಾಳಸರ್ಪ ದೋಷ ಕುರಿತಂತೆ ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ.

ಅನಂತ ಕಾಳಸರ್ಪ:

ಲಗ್ನದಲ್ಲಿ ರಾಹುವಿದ್ದು ಕೇತು ಏಳನೆಯ ಮನೆಯಲ್ಲಿದ್ದರೆ ಜಾತಕನಿಗೆ ಅನಂತ ಕಾಳಸರ್ಪ ಯೋಗವಿರುತ್ತದೆ. ಅಂತಹ ಜಾತಕನು ವೃಥಾ ಅಪವಾದಕ್ಕೆ ಗುರಿಯಾಗುತ್ತಾನೆ. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಾನೆ ಎನ್ನಲಾಗುತ್ತದೆ.

ಕಾಳಿಕಾ ಕಾಳಸರ್ಪ:

ರಾಹು ಲಗ್ನದಿಂದ ಎರಡನೆಯ ಮನೆಯಲ್ಲಿದ್ದು, ಕೇತು ಎಂಟನೆಯ ಮನೆಯಲ್ಲಿದ್ದರೆ ಕಾಳಿಕಾ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ಯೋಗವಿರುವ ಜಾತಕನು ಆರ್ಥಿಕ ಸಮಸ್ಯೆಗಳಲ್ಲಿ ಬಳಲುವ ಸಾಧ್ಯತೆ ಹೆಚ್ಚು.

ವಾಸುಕಿ ಕಾಳಸರ್ಪ:

ರಾಹು ಲಗ್ನದಿಂದ ಮೂರನೆಯ ಮನೆಯಲ್ಲಿದ್ದು ಕೇತು ಒಂಬತ್ತನೆಯ ಮನೆಯಲ್ಲಿದ್ದರೆ ವಾಸುಕಿ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕಳತ್ರ ದೋಷವಿರುತ್ತದೆ ಎನ್ನಲಾಗುತ್ತದೆ. ಕೋರ್ಟಿನ ವ್ಯವಹಾರಗಳು ಅವರ ಪರವಾಗಿ ಆಗುವುದು ಕಡಿಮೆ.

ಶಂಖಪಾಲ ಕಾಳಸರ್ಪ:

ಲಗ್ನದಿಂದ ರಾಹು ನಾಲ್ಕನೆಯ ಮನೆಯಲ್ಲಿದ್ದು ಕೇತು 10ನೇ ಮನೆಯಲ್ಲಿದ್ದರೆ ಶಂಖಪಾಲ ಕಾಳಸರ್ಪ ಯೋಗವಿರುತ್ತದೆ. ಈ ಯೋಗದ ಜಾತಕನು ಸ್ವಯಂಕೃತಾಪರಾಧಕ್ಕೆ ಒಳಗಾಗಿ ತಾನೇ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ಅದರಲ್ಲೂ ಆಸ್ತಿ, ಭೂ ವಿವಾದಗಳಲ್ಲಿ ತೊಂದರೆ ಹೆಚ್ಚು. ಆರ್ಥಿಕವಾಗಿಯೂ ಸಾಕಷ್ಟು ತೊಂದರೆಗಳಿಗೆ ತುತ್ತಾಗುತ್ತಾನೆ ಎಂದು ಜ್ಯೋತಿಷಿಗಳು ಅಭಿಪ್ರಾಯಿಸುತ್ತಾರೆ.

ಪದ್ಮ ಕಾಳಸರ್ಪ:

ಲಗ್ನದಿಂದ ಐದನೆಯ ಮನೆಯಲ್ಲಿ ರಾಹುವಿದ್ದು ಕೇತು 11ನೇ ಮನೆಯಲ್ಲಿದ್ದರೆ ಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರನ್ನು ಅನುವಂಶಿಕ ಅಥವಾ ಸಂತಾನ ದೋಷ ಕಾಡುವ ಸಾಧ್ಯತೆ ಹೆಚ್ಚು.

ಮಹಾಪದ್ಮ ಕಾಳಸರ್ಪ:

ಲಗ್ನ ಭಾವದಿಂದ ರಾಹು ಆರನೆಯ ಮನೆಯಲ್ಲಿದ್ದು ಕೇತು 12ನೇ ಮನೆಯಲ್ಲಿದ್ದರೆ ಮಹಾಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಈ ಯೋಗವಿರುವವರು ಪದೇ ಪದೇ ವೈಪಲ್ಯವನ್ನು ಎದುರಿಸುತ್ತಾರೆ.

ತಕ್ಷಕ ಕಾಳಸರ್ಪ:

ಲಗ್ನ ಭಾವದಿಂದ ರಾಹು ಏಳನೆಯ ಮನೆಯಲ್ಲಿದ್ದು ಕೇತು ಒಂದನೇ ಮನೆಯಲ್ಲಿದ್ದರೆ ತಕ್ಷ ಕ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರು ವೃಥಾ ಅಪವಾದಗಳಿಗೆ ಸಿಲುಕುತ್ತಾರೆ. ವ್ಯಾಪಾರ ಮತ್ತು ಸಂಬಂಧಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಸರ್ಪಶಾಪ : ಕುಜನ ಮನೆ ಪಂಚಮ ಭಾವವಾಗಿ ಅಲ್ಲಿ ರಾಹುವಿದ್ದು , ಕುಜನ ದೃಷ್ಟಿಯಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.. . ..

ಗುರುವು ರಾಹು ಜೊತೆಗಿದ್ದು, ಪಂಚಮಾಧಿಪತಿ ಬಲಹೀನನಾಗಿ, ಲಗ್ನಾಧಿಪತಿಯು ಕುಜನು ಜೊತೆಗಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.. . ..

ಪಂಚಮ ಭಾವವು ಬಲಹೀನವಾಗಿ,, ರಾಹು ಕೇತುಗಳ ದೃಷ್ಟಿಗೆ ಒಳಗಾಗಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.. . ..

ಪಂಚಮಾಧಿಪತಿ ಬಲಹೀನನಾಗಿ ರಾಹು ಕೇತುಗಳ ಜೊತೆ ಅಥವಾ ದೃಷ್ಟಿಗೊಳಗಾಗಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.. . ..

ಪಂಚಮ ಸ್ಥಾನ ಮೇಷ, ವೃಶ್ಚಿಕವಾಗಿ ಕುಜನು ರಾಹು, ಕೇತು ಗಳ ಜೊತೆಗಿದ್ದು ಬುಧನ ಸಂಬಂಧ ಹೊಂದಿದ್ದರೇ
ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.. . ..

ಹೆಚ್ಚಿನ ವಿವರಣೆಗಾಗಿ
Whatsapp madi
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564

Tags: #astrologyhoroscopejyothishya
ShareTweetSendShare
Join us on:

Related Posts

Bihar Railway Track

Bihar : ಮೊಬೈಲ್ ಟವರ್ ಬಳಿಕ, 2 ಕಿ.ಮೀ ರೈಲ್ವೆ ಹಳಿಯನ್ನೇ ಕದ್ದ ಕಳ್ಳರು…. 

by Naveen Kumar B C
February 7, 2023
0

Bihar : ಮೊಬೈಲ್ ಟವರ್ ಬಳಿಕ, 2 ಕಿ.ಮೀ ರೈಲ್ವೆ ಹಳಿಯನ್ನೇ ಕದ್ದ ಕಳ್ಳರು…. ಸುಮಾರು 2 ಕಿ.ಮೀ ರೈಲ್ವೆ ಹಳಿಯನ್ನ ದುಷ್ಕರ್ಮಿಗಳು ಕಳ್ಳತನ ಮಾಡಿರುವ ಪ್ರಕರಣ ...

Rama Sitha

Astrology : ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ… 

by Naveen Kumar B C
February 6, 2023
0

ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ... ಭಾರತೀಯ ಸಂಸ್ಕೃತಿಯ ಉಳಿವಿಗೆ ಗೃಹಸ್ಥಜೀವನ ಸುಭದ್ರವಾದ ಅಡಿಪಾಯ ಒದಗಿಸುವಂಥದ್ದು. ಆದರೆ ಈಗೀಗ ಆ ಗೃಹಸ್ಥ ಜೀವನದಲ್ಲಿ ದಾಂಪತ್ಯಜೀವನದಲ್ಲಿ ಹೆಚ್ಚಾಗಿ...

Bks varma

B. K. S Varma : ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಇನ್ನಿಲ್ಲ… 

by Naveen Kumar B C
February 6, 2023
0

ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಇನ್ನಿಲ್ಲ…   ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನರಾಗಿದ್ದಾರೆ.  ಕಳೆದ ಮೂರು ತಿಂಗಳಿಂದ ಆರೋಗ್ಯ ಸಂಬಂಧಿ...

 Ricky kej  

 Ricky kej  : ಸತತ ಮೂರನೇ ಭಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ… 

by Naveen Kumar B C
February 6, 2023
0

 Ricky kej  : ಸತತ ಮೂರನೇ ಭಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ…   ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್  ಸತತ ಮೂರನೇ  ಭಾರಿಗೆ ...

crime

Madhya Pradesh : 16 ವರ್ಷದ ಬಾಲಕನಿಂದ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ; ಕೊಲೆ… 

by Naveen Kumar B C
February 6, 2023
0

16 ವರ್ಷದ ಬಾಲಕನಿಂದ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ; ಕೊಲೆ… 16 ವರ್ಷದ ಬಾಲಕ 58 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಾಯಿಯನ್ನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Bihar Railway Track

Bihar : ಮೊಬೈಲ್ ಟವರ್ ಬಳಿಕ, 2 ಕಿ.ಮೀ ರೈಲ್ವೆ ಹಳಿಯನ್ನೇ ಕದ್ದ ಕಳ್ಳರು…. 

February 7, 2023
Rama Sitha

Astrology : ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ… 

February 6, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram