America: ನಾವು ಭಾರತದ ಪಾಲುದಾರರಾಗಲು ಸಮರ್ಥರಾಗಿದ್ದೇವೆ ಮತ್ತು ಸಿದ್ಧರಿದ್ದೇವೆ : ಅಮೆರಿಕ

1 min read
America Saaksha Tv

ನಾವು ಭಾರತದ ಪಾಲುದಾರರಾಗಲು ಸಮರ್ಥರಾಗಿದ್ದೇವೆ ಮತ್ತು ಸಿದ್ಧರಿದ್ದೇವೆ : ಅಮೆರಿಕ

ಅಮೆರಿಕ: ಉಕ್ರೇನ್ – ರಷ್ಯಾ ಯುದ್ಧ ಪ್ರಾರಂಭವಾಗಿ ಸುಮಾರು 2 ತಿಂಗಳುಗಳು ಆದವು. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವುದರೊಂದಿಗೆ ಅಲ್ಲಿ ಹಿಂಸಾಚಾರವನ್ನು ಮಾಡುತ್ತಿದೆ. ಈ ಹಿನ್ನಲೇಯಲ್ಲಿ ರಷ್ಯಾದೊಂದಿಗೆ ಶಸ್ತ್ರಾಸ್ತ್ರ ವಹಿವಾಟುಗಳನ್ನು ನಡೆಸದಂತೆ ಅಮೆರಿಕ ಕರೆ ನೀಡುತ್ತಿದೆ.

ಭಾರತ ಮತ್ತು ಅಮೆರಿಕದ ರಕ್ಷಣ ಮತ್ತು ವಿದೇಶಾಂಗ ಸಚಿವರ ನಡುವಿನ 2+2 ಸಚಿವರ ಮಾತುಕತೆಯ ನಂತರ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ರಷ್ಯಾದೊಂದಿಗೆ ಶಸ್ತ್ರಾಸ್ತ್ರಗಳ ಒಪ್ಪಂದ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ.

ಇನ್ನೂ ಭಾರತ ಈಗಾಗಲೇ ರಷ್ಯಾದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದು, ಭಾರತದ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ರಷ್ಯಾದೊಂದಿಗೆ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಹೊಸ ವಹಿವಾಟುಗಳನ್ನು ನಡೆಸದಂತೆ ನಾವು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತೇವೆ. ಎಸ್​ 400 ಆ್ಯಂಟಿ ಮಿಸೈಲ್ ಸಿಸ್ಟಂ ಅನ್ನು ಭಾರತ ಖರೀದಿಸಿದ್ದು, ಈ ಕುರಿತು ಇನ್ನೂ ನಿರ್ಣಯ ಮಾಡಿಲ್ಲ ಎಂದಿದ್ದಾರೆ.

ಜೊತೆಗೆ ಮಿಲಿಟರಿ ಉಪಕರಣಗಳ ವ್ಯಾಪಾರದಲ್ಲಿ ಭಾರತ ಮತ್ತು ರಷ್ಯಾ ನಡುವೆ ಸುದೀರ್ಘ ಇತಿಹಾಸವಿದೆ. ನಾವು ಭಾರತಕ್ಕೆ ರಕ್ಷಣಾ ಉಪಕರಣಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭದಲ್ಲಿ ರಷ್ಯಾ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈಗ ನಾವು ಭಾರತದ ಪಾಲುದಾರರಾಗಲು ಸಮರ್ಥರಾಗಿದ್ದೇವೆ ಮತ್ತು ಸಿದ್ಧರಿದ್ದೇವೆ ಎಂದು ಬ್ಲಿಂಕನ್ ಭರವಸೆ ನೀಡಿದರು.

ಇದರ ಜೊತೆಗೆ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಮೆರಿಕ ಭಾರತದೊಂದಿಗೆ ಮಿಲಿಟರಿ ಆಧುನೀಕರಣದ ಬಗ್ಗೆ ಚರ್ಚಿಸುತ್ತಿದೆ. ಭಾರತಕ್ಕೆ ಶಸ್ತ್ರಗಳನ್ನು ಹೆಚ್ಚು ಸಿಗುವಂತೆ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd