ಅಥಣಿ | ಸಾಲದ ಶೂಲಕ್ಕೆ ರೈತ ಬಲಿ

1 min read
ATANI

ಅಥಣಿ | ಸಾಲದ ಶೂಲಕ್ಕೆ ರೈತ ಬಲಿ

ಅಥಣಿ : ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.

44 ವರ್ಷದ ರವೀಂದ್ರ ದಾನಸೂರ ಆತ್ಮಹತ್ಯೆ ಮಾಡಿಕೊಂಡಿರುವ ರೈತನಾಗಿದ್ದಾನೆ. ಈತ ಮನೆ ಪಕ್ಕದ ಶೆಡ್ನಲ್ಲಿ ನೇಣಿಗೆ ಶರಣಾಗಿದ್ದಾರೆ.

ರವೀಂದ್ರ ಕೃಷಿಗಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ 5 ಲಕ್ಷ, ಪಿಕೆಪಿಎಸ್ ಬ್ಯಾಂಕ್ ನಲ್ಲಿ 1 ಲಕ್ಷ ಹಾಗೂ ಇತರ ಸ್ವಸಹಾಯ ಸಂಘಗಳ ಮುಖಾಂತರ 3 ಲಕ್ಷ ಸೇರಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಾಲ ಹೊಂದಿದ್ದರು.

ATANI

ಆದ್ರೆ ಬೆಳೆ ಕೈಗೆ ಬಾರದ ಹಿನ್ನೆಲೆ ಸಾಲಭಾದೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd