PHONE PE , GOOGLE PE ಸಹಾಯದಿಂದ ATM ನಲ್ಲಿಯೇ ಹಣ ವಿತ್ ಡ್ರಾ ಮಾಡಬಹುದು..! ಹೇಗೆ ಗೊತ್ತಾ..?

1 min read

PHONE PE , GOOGLE PE ಸಹಾಯದಿಂದ ATM ನಲ್ಲಿಯೇ ಹಣ ವಿತ್ ಡ್ರಾ ಮಾಡಬಹುದು..! ಹೇಗೆ ಗೊತ್ತಾ..?

ದಿನೇ ದಿನೇ ಡಿಜಿಟಲ್ ಕ್ಷೇತ್ರ ತುಂಬಾನೆ ಅಪ್ ಡೇಟ್ ಆಗ್ತಿದೆ. 3- 4 ವರ್ಷಗಳಿಂದ ATM ಕಾರ್ಡ್ ಗಿಂತಲೂ ಮೊಬೈಲ್ ಬ್ಯಾಂಕಿಂಗ್ ತುಂಬಾ ಪ್ರಚಲಿತಲ್ಲಿದೆ. ಈಗ ಪ್ರಸ್ತುತ ಫುಟ್ ಪಾತ್, ಪೆಟ್ಟಿ ಅಂಗಡಿ, ಚಿಕ್ಕ ಪುಟ್ಟ ಅಂಗಡಿಗಳಲ್ಲೂ ಫೋನ್ ಪೇ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ.

ಒಟ್ಟಾರೆ ಭಾರತವೂ ಡಿಜಿಟಲೀಕರಣಗೊಳ್ಳುತ್ತಿದೆ. ಈ ನಡುವೆ ಫೋನ್ ಪೇ , ಗೂಗಲ್ ಪೇ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇನ್ಮುಂದೆ ಫೋನ್ ಪೇ , ಗೂಗಲ್ ಪೇ ಮೂಲಕ ATM ನಲ್ಲಿಯೂ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು.

ಹೌದು.. ಇಂತಹದೊಂದು ಯೋಜನೆ ತರುವ ಚಿಂತನೆ ನಡೆದಿದ್ದು, ಕಾರ್ಡ್ಲೆಸ್ ವ್ಯವಹಾರಕ್ಕೆ ಉತ್ತೇಜನ ಸಿಗಲಿದೆ. ಎಟಿಎಂ ಕಂಪನಿಯಾಗಿರುವ NCR ಕಾರ್ಪೋರೇಷನ್ ಈ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ NCR ಜೊತೆಗೆ ಸಿಟಿ ಯೂನಿಯನ್ ಬ್ಯಾಂಕ್ ಸಾಥ್ ನೀಡಿದೆ.

ಮೊದಲ ಹಂತದಲ್ಲಿ ಸುಮಾರು 1500 ATMಗಳನ್ನು ಅಪ್ ಗ್ರೇಡ್ ಮಾಡಲಾಗುತ್ತಿದೆ. ಈ ATMಳಲ್ಲಿ ಮಾತ್ರ ಹೊಸ ಆಯ್ಕೆಯ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

UPI APP ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು. ಈ ವಿಶೇಷ ಸೌಲಭ್ಯದೊಂದಿಗೆ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್ಸಿಆರ್ ಕಾರ್ಪೊರೇಶನ್ನೊಂದಿಗೆ ಕೈಜೋಡಿಸಿದೆ. ಈ ಸೌಲಭ್ಯದೊಂದಿಗೆ ಬ್ಯಾಂಕ್ ಇದುವರೆಗೆ 1500 ಕ್ಕೂ ಹೆಚ್ಚು ಎಟಿಎಂಗಳನ್ನು ನವೀಕರಿಸಿದೆ.

ಹಣ ವಿತ್ ಡ್ರಾ ಮಾಡುವ ವಿಧಾನ

ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ ತೆರೆಯಿರಿ, ನಂತರ ಎಟಿಎಂ ಸ್ಕ್ರೀನ್ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ. ಬಳಿಕ ನಿಮಗೆ ಬೇಕಾದ ಮೊತ್ತದ ಹಣವನ್ನು ಮೊಬೈಲ್ನಲ್ಲಿ ನಮೂದಿಸಿ. ನಂತರ ನಿಮ್ಮ 4 ಅಥವಾ 6 ಅಂಕಿಯ ಯುಪಿಐ ಪಿನ್ ಸಂಖ್ಯೆಯನ್ನು ನಮೂದಿಸ. ನಂತರ ಪ್ರೊಸೀಡ್ ಬಟನ್ ಕ್ಲಿಕ್ ಮಾಡುವ ಮೂಲಕ ದೃಢೀಕರಿಸಿ. ಆ ನಂತರ ಹಣವನ್ನ ವಿತ್ ಡ್ರಾ ಮಾಡಿಕೊಳ್ಳಬಹುದು. ಆದ್ರೆ ನೀವು ಒಂದು ಸಮಯದಲ್ಲಿ ಗರಿಷ್ಠ 5 ಸಾವಿರ ರೂಪಾಯಿಗಳನ್ನು ಮಾತ್ರ ಹಿಂಪಡೆಯಬಹುದು.

ಭಾರತದ ಮಾರುಕಟ್ಟೆಗೆ ಬರಲಿದೆ ಅಗ್ಗದ ಬರ್ಡ್‌ ಎಲೆಕ್ಟ್ರಿಕ್‌ ಸ್ಕೂಟರ್‌..! ಇದರ ವೈಶಿಷ್ಠ್ಯಗಳೇನು..?

ಕಾರುಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುವುದು ಯಾಕೆ..?

ದಿನಕ್ಕೆ ಹಲವು ಬಾರಿ ತನ್ನ ಬಣ್ಣವನ್ನು ಬದಲಾಯಿಸುವ ಶಿವಲಿಂಗ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd