ನಲಪಾಡ್ ಒಡೆತನದ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ, ಕಿರುಕುಳ
ಕಾಂಗ್ರೇಸ್ ಯವ ಅದ್ಯಕ್ಷರಾಗಿರುವ ಮೊಹಮ್ಮದ್ ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡಿರುವ ಕುರಿತು ಎನ್ ಆರ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಸಿ ಸಿ ಟಿ ವಿ ದೃಶ್ಯಗಳು ಲಭ್ಯವಾಗಿವೆ.
ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ಕೃತಿಕಾ ಗೌಡ ಅವರು ಮೂರು ವರ್ಷದ ಅಂಗ್ರಿಮೆಂಟ್ ಮಾಡಿಕೊಂಡು ಕೇಸರಿ ಹೋಟೆಲ್ ನಡೆಸುತ್ತಿದ್ದಾರೆ. ರೆಸ್ಟೋರೆಂಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಿಯಾಜ್ ಅಹಮದ್ ಎಂಬುವವರು ನೂಕಾಟ ತಳ್ಳಾಟ ನಡೆಸಿದ್ದಾರೆ.
3 ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದು 1 ವರ್ಷಕ್ಕೆ ಖಾಲಿಮಾಡಿಸಲು ಮುಂದಾಗಿದ್ದಾರೆ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕೃತ್ತಿಕ ಗೌಡ ಅವರು ಆರೋಪಿಸಿದ್ದಾರೆ. ಮೈಸೂರಿನ ನ್ ಆರ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
attack on woman at nalapad owned restaurant in Mysore