ದೇವನಹಳ್ಳಿ: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಘಟನೆ ದೇವನಹಳ್ಳಿ ಕೆಂಪೇಗೌಡ ಏರ್ಪೋರ್ಟ್ (Kempegowda Airport) ನಲ್ಲಿ ನಡೆದಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನಾಭರಣ ಸಾಗಿಸಲು ಯತ್ನಿಸಿದ್ದಾರೆ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ವುಡ್ ಪ್ಲೇಟ್ ಹಾಗೂ ಚಾಕುವಿನ ಹ್ಯಾಂಡಲ್ ನಲ್ಲಿ ಚಿನ್ನ ಇಟ್ಟು ಸಾಗಾಟ ಮಾಡಿದ್ದು, ಪೇಸ್ಟ್ ರೂಪದಲ್ಲಿ ವುಡ್ಪ್ಲೇಟ್ ಮೇಲೆ ಚಿನ್ನ ಅಂಟಿಸಿದ್ದಾರೆ. ಅನುಮಾನಗೊಂಡು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. ಬಂಧಿತರಿಂದ 19 ಲಕ್ಷ ರೂ. ಮೌಲ್ಯದ 298ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಇಂಡಿಗೋ 6E-1486 ಫ್ಲೈಟ್ ನಲ್ಲಿ ಬಂದಿದ್ದರು ಎನ್ನಲಾಗಿದೆ.
ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.