AUS Open : ಗಾಯದ ಸಮಸ್ಯೆ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಜೋಕೊವಿಕ್
AUS Open ನಾಲ್ಕನೆ ಸುತ್ತಿಗೆ ನವೊಕ್ ಜೊಕೊವಿಕ್ ಲಗ್ಗೆ ಗಾಯದ ಸಮಸ್ಯೆ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಅಗ್ರ ಆಟಗಾರ ನವೊಕ್ ಜೋಕೊವಿಕ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತು ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ಜೋಕೊವಿಕ್ ಮೆಲ್ಬೋರ್ನ್ ಅಂಗಳದಲ್ಲಿ 24ನೇ ಪಂದ್ಯ ಗೆದ್ದ ಸಾಧನೆ ಮಾಡಿದ್ದಾರೆ. ಮಾಜಿ ಆಟಗಾರ ಆ್ಯಂಡ್ರೆ ಅಗಾಸ್ಸಿ ಅವರ (25)ದಾಖಲೆ ಸರಿಗಟ್ಟಲು ಇನ್ನು ಒಂದು ಗೆಲುವು ಬೇಕಿದೆ.
ಮೆಲ್ಬೋರ್ನ್ನ ರಾಡ್ ಲಾವೆರ್ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೆ ಪಂದ್ಯದಲ್ಲಿ ಜೋಕೊವಿಕ್ ಎದುರಾಳಿ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ 7-6 (7), 6-3, 6-4 ಅಂಕಗಳಿಂದ ಮಣಿಸಿದರು.
ಜೋಕೊವಿಕ್ ಅವರ ಮೂರು ಸರ್ವ್ಗಳನ್ನು ಡಿಮಿಟ್ರೊವ್ ಮುರಿದರು. ಆದರೆ ಡಿಮಿಟ್ರೊವ್ 50 ತಪ್ಪುಗಳನ್ನು ಮಾಡಿದ್ದು ಜೋಕೊವಿಕ್ಗೆ ನೆರವಾಯಿತು.
ಮತ್ತೊಂದು ಸಿಂಗಲ್ಸ್ ವಿಭಾಗದಲ್ಲಿ ಮಾಜಿ ಚಾಂಪಿಯನ್ ಆಟಗಾರ ಆ್ಯಂಡಿ ಮರ್ರೆ 3 ಗಂಟೆ ಹೋರಾಡಿ ಸ್ಪೇನ್ನ ರೊಬರ್ಟೊ ವಿರುದ್ಧ 1-6, 7-6 (7), 3-6, 4-6 ಅಂಕಗಳಿಂದ ಸೋಲು ಕಂಡರು.
ಮಹಿಳಾ ಸಿಂಗಲ್ಸ್ನಲ್ಲಿ 4ನೇ ಸೀಡ್ ಆಟಗಾರ್ತಿ ಕಾರೊಲಿನಾ ಗಾರ್ಸಿಯಾ ಜರ್ಮನಿ ಲಾರಾ ಸಿಗ್ಮಂಡ್ ವಿರುದ್ಧ 1-6, 6-3, 6-3 ಅಂಕಗಳಿಂದ ಗೆದ್ದರು.
ಮಿಶ್ರ ಡಬಲ್ಸ್ನಲ್ಲಿ ಭಾರತ ಶುಭಾರಂಭ
ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಮಿಶ್ರ ಡಬಲ್ಸ್ನಲ್ಲಿ ಶುಭಾರಂಭ ಮಾಡಿದೆ. ಭಾರತದ ಜೋಡಿ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾ ಜಾಮಿ ಮತ್ತು ಲೂಕ್ ಸಾವಿಲ್ಲೆ ಜೋಡಿ ವಿರುದ್ಧ 7-5, 6-3 ಅಂಗಳಿಂದ ಮಣಸಿ ಎರಡನೆ ಸುತ್ತು ಪ್ರವೇಶಿಸಿತು.
AUS Open , novak djokovic , extrordinary performance








