ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಅಬ್ಬರದ ಶತಕ ಸಿಡಿಸಿ ಮಿಂಚಿದ ಟ್ರಾವಿಸ್ ಹೆಡ್(109), ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 5ನೇ ಬ್ಯಾಟರ್ ಎನಿಸಿದರು.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ ಹೆಡ್, ಆಸ್ಟ್ರೇಲಿಯಾ ಪರವಾಗಿ ಕಣಕ್ಕಿಳಿಯುವ ಅವಕಾಶ ಪಡೆದರು. ಗಾಯದ ಸಮಸ್ಯೆಯಿಂದಾಗಿ ಮೊದಲ ಐದು ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಟ್ರಾವಿಸ್ ಹೆಡ್, ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಆಡುವ ಅವಕಾಶ ಸಹ ಪಡೆದರು. ಬಿರುಸಿನ ಬ್ಯಾಟಿಂಗ್ನಿಂದ ಮಿಂಚಿದ ಹೆಡ್, ಕೇವಲ 25 ಬಾಲ್ಗಳಲ್ಲಿ ಅರ್ಧಶತಕ ದಾಖಲಿಸಿ ಮಿಂಚಿದರು.
ಇದೇ ಆತ್ಮವಿಶ್ವಾಸದಲ್ಲಿ ಕಿವೀಸ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ ಟ್ರಾವಿಸ್ ಹೆಡ್, 59 ಬಾಲ್ಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೇ ಏಕದಿನ ಕ್ರಿಕೆಟ್ನಲ್ಲಿ ಆಸೀಸ್ ಪರ 3ನೇ ವೇಗದ ಶತಕ ದಾಖಲಿಸಿದ ಹೆಗ್ಗಳಿಕೆಗೂ ಹೆಡ್ ಭಾಜನರಾದರು. ಜೊತೆಗೆ ಡೇವಿಡ್ ವಾರ್ನರ್ ಅವರ ಜೊತೆಗೂಡಿ 19.1 ಓವರ್ಗಳಲ್ಲಿ 175 ರನ್ಗಳಿಸಿ ತಂಡಕ್ಕೆ ಅತ್ಯುತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಅಂತಿಮವಾಗಿ 67 ಬಾಲ್ಗಳಲ್ಲಿ 10 ಬೌಂಡರಿ, 7 ಸಿಕ್ಸರ್ಗಳೊಂದಿಗೆ 109 ರನ್ಗಳಿಸಿ ಗ್ಲೆನ್ ಫಿಲಿಪ್ಸ್ ಅವರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಆಸೀಸ್ನ 5ನೇ ಆಟಗಾರ:
ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಟ್ರಾವಿಸ್ ಹೆಡ್, ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 5ನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ 1983ರಲ್ಲಿ ಟ್ರೆವರ್ ಚಾಪೆಲ್ ಅವರು ಭಾರತ ತಂಡದ ವಿರುದ್ಧ 110 ರನ್ಗಳಿಸುವ ಮೂಲಕ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಬಳಿಕ 1987ರಲ್ಲಿ ಜೆಫ್ ಮಾರ್ಷ್(110*) ಸಹ ನ್ಯೂಜಿ಼ಲೆಂಡ್ ಶತಕ ಸಿಡಿಸಿ ಸಂಭ್ರಮಿಸಿದ್ದರು. ಬಳಿಕ 2003ರಲ್ಲಿ ಆಸೀಸ್ ತಂಡದ ಸ್ಟಾರ್ ಆಲ್ರೌಂಡರ್ ಆಗಿದ್ದ ಆಂಡ್ರ್ಯೂ ಸೈಮಂಡ್ಸ್(143) ಪಾಕಿಸ್ತಾನದ ವಿರುದ್ಧ ಅದ್ಭುತ ಶತಕ ದಾಖಲಿಸಿದ್ದರು. ಇನ್ನೂ 2015ರಲ್ಲಿ ಆರನ್ ಫಿಂಚ್(135) ಇಂಗ್ಲೆಂಡ್ ವಿರುದ್ಧ ಚೊಚ್ಚಲ ವಿಶ್ವಕಪ್ ಪಂದ್ಯದ ಶತಕ ಸಿಡಿಸಿದ್ದರು.
2023ರ ವಿಶ್ವಕಪ್ನ 4ನೇ ಆಟಗಾರ:
ಪ್ರಸಕ್ತ ವಿಶ್ವಕಪ್ನಲ್ಲಿ ಟ್ರಾವಿಸ್ ಹೆಡ್ ಅವರಿಗೂ ಮುನ್ನ ಮೂವರು ಆಟಗಾರರು ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದಾರೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ನ್ಯೂಜಿ಼ಲೆಂಡ್ ತಂಡದ ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಈ ಸಾಧನೆ ಮಾಡಿದ್ದರೆ. ಇವರ ನಂತರ ಪಾಕಿಸ್ತಾನದ ಅಬ್ದುಲ್ಲಾ ಶಫೀಕ್ ಅವರು ಸಹ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಸೆಂಚುರಿಸಿ ಬಾರಿಸಿದ್ದರು.
AUS v NZ, Australia, New Zealand, Travis Head, World Cup