ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ವಿಶ್ವಕಪ್ ಲಿಸ್ಟ್‌ನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನ ಹಿಂದಿಕ್ಕಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್, ಇದರೊಂದಿಗೆ ಏಕದಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಅವರನ್ನ ಹಿಂದಿಕ್ಕಿದರು. ಕಿವೀಸ್ ವಿರುದ್ಧ ಅದ್ಭುತ ಆಟವಾಡಿದ ಆರಂಭಿಕ ಬ್ಯಾಟರ್, (81 ರನ್, 65 ಬಾಲ್, 5 ಬೌಂಡರಿ, 6 ಸಿಕ್ಸ್) ಅರ್ಧಶತಕ ಬಾರಿಸಿ ಮಿಂಚಿದರು.

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಯಲ್ಲಿ ಈವರೆಗೂ 31 ಇನ್ನಿಂಗ್ಸ್‌ಗಳಲ್ಲಿ 1384 ರನ್‌ಗಳಿಸುವ ಮೂಲಕ ಹೆಚ್ಚು ರನ್‌ಗಳಿಸಿದ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ 81 ರನ್‌ಗಳಿಸಿದ ವಾರ್ನರ್, ವಿಶ್ವಕಪ್‌ನಲ್ಲಿ 24 ಇನ್ನಿಂಗ್ಸ್‌ಗಳಲ್ಲಿ 1405 ರನ್‌ಗಳಿಸುವ ಮೂಲಕ ಕಿಂಗ್ ಕೊಹ್ಲಿ ಅವರನ್ನ ಹಿಂದಿಕ್ಕಿದ್ದಾರೆ.
ಹೇಡನ್ ದಾಖಲೆ ಮುರಿದ ವಾರ್ನರ್:
ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ 81 ರನ್‌ಗಳಿಸಿ ಮಿಂಚಿದ ವಾರ್ನರ್, ಆ ಮೂಲಕ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರ ವಿಶ್ವಕಪ್ ದಾಖಲೆಯನ್ನ ಮುರಿದಿದ್ದಾರೆ. ಕಿವೀಸ್ ವಿರುದ್ಧದ ಇನ್ನಿಂಗ್ಸ್‌ನಲ್ಲಿ 6 ಸಿಕ್ಸ್‌ಗಳನ್ನ ಬಾರಿಸಿದ ವಾರ್ನರ್, ಆ ಮೂಲಕ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ಸಿಕ್ಸ್ ಬಾರಿಸಿರುವ ಆಸೀಸ್ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 2011ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಮ್ಯಾಥ್ಯೂ ಹೇಡನ್, ಆಡಿದ 11 ಪಂದ್ಯಗಳಲ್ಲಿ 18 ಸಿಕ್ಸ್ ಬಾರಿಸಿದ್ದರು. ಆದರೆ ಪ್ರಸಕ್ತ ವಿಶ್ವಕಪ್‌ನಲ್ಲಿ 6 ಪಂದ್ಯಗಳನ್ನ ಆಡಿರುವ ಡೇವಿಡ್ ವಾರ್ನರ್, 19 ಸಿಕ್ಸ್‌ಗಳನ್ನ ಸಿಡಿಸಿದ್ದಾರೆ.
AUS v NZ, Australia, New Zealand, David Warner, CWC 2023








