ಚೀನಾಗೆ ಗುನ್ನಾ ಕೊಟ್ಟ ಆಸ್ಟ್ರೇಲಿಯಾ – ಚೀನಾ ಕಂಪನಿ ಜೊತೆಗಿನ​ ಒಪ್ಪಂದ ಮುರಿಯುವ ನಿರ್ಧಾರ

1 min read

ಚೀನಾಗೆ ಗುನ್ನಾ ಕೊಟ್ಟ ಆಸ್ಟ್ರೇಲಿಯಾ – ಚೀನಾ ಕಂಪನಿ ಜೊತೆಗಿನ​ ಒಪ್ಪಂದ ಮುರಿಯುವ ನಿರ್ಧಾರ

ಉತ್ತರ ಆಸ್ಟ್ರೇಲಿಯಾದ ಡಾರ್ವಿನ್​ ನಗರದಲ್ಲಿರೋ ಮಿಲಿಟರಿ ಬಂದರನ್ನ ಚೀನಾ ಮೂಲದ ಕಂಪನಿಗೆ ಲೀಸ್​ಗೆ ಕೊಟ್ಟಿರೋ ನಿರ್ಧಾರವನ್ನ ಪುನರ್ ಪರಿಶೀಲಸಲು ಆಸ್ಟ್ರೇಲಿಯಾ ಮುಂದಾಗಿದೆ. ಚೀನಾದ ಲ್ಯಾಂಡ್​ಬ್ರಿಜ್​ ಗ್ರೂಪ್​​ಗೆ ಈ ಬಂದರನ್ನ 99 ವರ್ಷ ಕಾಲ ಲೀಸ್​ಗೆ ಕೊಡಲು 2015ರಲ್ಲಿ ಒಪ್ಪಂದವಾಗಿತ್ತು. ಆದ್ರೆ ಲ್ಯಾಂಡ್​ಬ್ರಿಜ್​ ಕಂಪನಿಯು ಚೀನಾ ಸೇನೆ ಜೊತೆ ನಿಕಟ ಸಂಬಂಧ ಹೊಂದಿದೆ ಅಂತ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಚೀನಾ ಕಂಪನಿಗೆ ಆಸ್ಟ್ರೇಲಿಯಾ ತನ್ನ ಮಿಲಿಟರಿ ಬಂದರನ್ನ ಲೀಸ್​ಗೆ ಕೊಡ್ತಿರೋದು ಅಮೆರಿಕದ ಕೆಂಗಣ್ಣಿಗೂ ಗುರಿಯಾಗಿತ್ತು.

2015ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್​ ಒಬಾಮಾ ಈ ಬಗ್ಗೆ ಅಂದಿನ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೋಮ್ ಟರ್ನ್​​ಬುಲ್​ ಬಳಿ ಅಸಮಾಧಾನ ವ್ಯಕ್ತಪಡಿಸಿದ್ರು. ಕಳೆದ ವಾರವಷ್ಟೇ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಬಂದರುಗಳ ಮಾಲೀಕತ್ವ ಬಗ್ಗೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದರು. ಇದೀಗ ಡಾರ್ವಿನ್​ ಪೋರ್ಟ್​​ನ ಲೀಸ್​ ಚೀನಾ ಕಂಪನಿಗೆ ಕೊಟ್ಟಿದ್ದನ್ನ ಪುನರ್ ಪರಿಶೀಲಸಲು ಮುಂದಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd