ಆಸೀಸ್ ಟೆಸ್ಟ್ ಸರಣಿ : ಭಾರತಕ್ಕೆ ಹೀನಾಯ ಸೋಲು
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲುಂಡಿದೆ.
ಪಂದ್ಯದ ಮೂರನೇ ದಿನ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮೆನ್ ಗಳು ಪೆವಿಲಿಯನ್ ಪರೇಡ್ ನಡೆಸಿ, ಆಸ್ಟ್ರೇಲಿಯಾಗೆ 90 ರನ್ ಗುರಿ ನೀಡಿದ್ದರು.
ಸುಲಭ ಗುರಿ ಪಡೆದು ಮೈದಾನಕ್ಕಿಳಿದ ಆಸೀಸ್ ಬ್ಯಾಟ್ಸ್ ಮೆನ್ ಗಳು ಆರಂಭದಿಂದಲೇ ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ರು. ಯಾವುದೇ ಹಂತದಲ್ಲಿ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಲು ಆಸೀಸ್ ಬಿಡಲೇ ಇಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ 33 ರನ್, ಜೋ ಬನ್ರ್ಸ್ 51 ರನ್, ಮಾರ್ನಸ್ 6 ರನ್, ಸ್ಮಿತ್ 1 ರನ್ ಗಳಿಸಿದ್ರು.
ಭಾರತದ ಪರ ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆದರು.
ಇನ್ನು ಇದಕ್ಕೂ ಮುನ್ನ 9 ರನ್ ಗೆ ಒಂದು ವಿಕೆಟ್ ಕಳೆದುಕೊಂಡು ತೃತೀಯ ದಿನದಾಟ ಆರಂಭಿಸಿದ ಭಾರತ ಮೊದಲು ನೈಟ್ ವಾಚ್ ಮ್ಯಾನ್ ಬುಮ್ರಾ ವಿಕೆಟ್ ಕಳೆದುಕೊಂಡಿತು. ಬಳಿಕ ಮಯಾಂಕ್ ಅಗರ್ವಾಲ್ ಕೂಡಾ 9 ರನ್ ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಪೂಜಾರ (ಸೊನ್ನೆ) ಸುತ್ತಿದ್ರೆ, ಕೊಹ್ಲಿ (4), ರಹಾನೆ (ಸೊನ್ನೆ), ಹನುಮ ವಿಹಾರಿ (8) ಸಹಾ 4 ರನ್ ಗಳಿಸಿ ನಂತೆ ಟೆಲಿಫೋನ್ ನಂಬರ್ ಸುತ್ತಿದ್ರು.
ಆಸೀಸ್ ಪರ ಕಮಿನ್ಸ್ ಐದು ವಿಕೆಟ್ ಪಡೆದರೆ, ಹ್ಯಾಜಲ್ ವುಡ್ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು.









