ಡಾಮಿನ್ ರೈಟ್ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್…!

1 min read
Damien Wright has worked with Australian Big Bash League austrelia punjabkings saakshatv

ಡಾಮಿನ್ ರೈಟ್ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್…!

@punjabkings @ipl2021 #kannadanews #AnilKumble#saakshatv

kl rahul saakshatv punjab kings ipl 2021 prithi zinta14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಅದ್ಭುತ ಆಟಗಾರರು ಇದ್ರೂ ಕೊನೆ ಕ್ಷಣದಲ್ಲಿ ಅದೃಷ್ಟ ಕೈಕೊಡುತ್ತಿತ್ತು.
ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬದಲು ಪಂಜಾಬ್ ಕಿಂಗ್ಸ್ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ.
ಈಗಾಗಲೇ ಐಪಿಎಲ್ ಹರಾಜಿನಲ್ಲಿ ತನಗೆ ಬೇಕಾದ ಆಟಗಾರರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿಕೊಂಡಿದೆ.
ಇದೀಗ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಡಾಮಿನ್ ರೈಟ್ ಅವರನ್ನು ನೇಮಕ ಮಾಡಿದೆ. ಡಾಮಿನ್ ರೈಟ್ ಆಸ್ಟ್ರೇಲಿಯಾದ ಪ್ರಥಮ ದರ್ಜೆಯ ಕ್ರಿಕೆಟಿಗ. ಅಲ್ಲದೆ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಹೊಬರ್ಟ್ ತಂಡ ಹಾಗೂ ಮೆಲ್ಬನ್ರ್ಸ್ ಸ್ಟಾರ್ ತಂಡದ ಪರ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

@punjabkings @ipl2021 #kannadanews #AnilKumble#saakshatv
45ರ ಹರೆಯದ ಡಾಮಿನ್ ರೈಟ್ ಅವರು ಬಾಂಗ್ಲಾದೇಶದ 19 ವಯೋಮಿತಿ ತಂಡದ ಹೆಡ್ ಕೋಚ್ ಕೂಡ ಆಗಿದ್ದರು. ಇದೀಗ ಡಾಮಿನ್ ರೈಟ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಅನಿಲ್ ಕುಂಬ್ಳೆ ಹೆಡ್ ಕೋಚ್ ಆಗಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವುದು ಸಂತಸವನ್ನುಂಟು ಮಾಡಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಪ್ರತಿಭಾವನ್ವಿತ ಆಟಗಾರರಿದ್ದಾರೆ. ಇವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಡಾಮಿನ್ ರೈಟ್ ತಿಳಿಸಿದ್ದಾರೆ.
ಇನ್ನು ಡಾಮಿನ್ ರೈಟ್ ತಂಡವನ್ನು ಸೇರಿಕೊಂಡಿರುವುದರಿಂದ ಅವರ ಅನುಭವ ತಂಡಕ್ಕೆ ಉತ್ತೇಜನವನ್ನು ನೀಡಲಿದೆ ಎಂದು ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಹೆಡ್ ಕೋಚ್ ಅನಿಲ್ ಕುಂಬ್ಳೆ ಜೊತೆ ಸಹಾಯಕ ಕೋಚ್ ಆಂಡಿ ಫ್ಲವರ್, ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್, ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಜೊತೆ ಬೌಲಿಂಗ್ ಕೋಚ್ ಡಾಮಿನ್ ರೈಟ್ ಕೂಡ ಸೇರಿಕೊಂಡಿದ್ದಾರೆ.

ಏಪ್ರಿಲ್ 12ರಿಂದ ಪಂಜಾಬ್ ಕಿಂಗ್ಸ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಆಡಲಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಕೆ.ಎಲ್. ರಾಹುಲ್ ಮುನ್ನೆಡೆಸಲಿದ್ದಾರೆ.

@punjabkings @ipl2021 #kannadanews #AnilKumble#saakshatv #Damien Wright

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd