Avatar 2 : ಭಾರತದಲ್ಲಿ ಮೊದಲ ದಿನವೇ 41 ಕೋಟಿ ಗಳಿಸಿದ ಚಿತ್ರ…
‘ಟೈಟಾನಿಕ್’ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್ 2’ ಚಿತ್ರ ಅದ್ಭುತ ದೃಶ್ಯಕಾವ್ಯವನ್ನೇ ಸಿನಿಮಾ ಪ್ರೇಮಿಗಳಿಗೆ ತೆರದಿಟ್ಟಿದೆ. ಭಾರತದಲ್ಲೂ ಇದರ ಕ್ರೇಜ್ ಹೆಚ್ಚಾಗಿದ್ದೂ ಬಿಡುಗಡೆಯದ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.
‘ಅವತಾರ್ 2’ ಬಿಡುಗಡೆಯಾದ ಮೊದಲ ದಿನವೇ 41 ಕೋಟಿ ರೂ ಕಲೆಕ್ಷನ್ ಮಾಡಿ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಹಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲಿ ಹಾಲಿವುಡ್ ಚಿತ್ರಗಳ ಇದುವೆರೆಗಿನ ಮೊದಲ ದಿನದ ದಾಖಲೆ ‘ಅವೆಂಜರ್ಸ್ ಎಂಡ್ ಗೇಮ್’ ಹೆಸರಿನಲ್ಲಿದೆ. ಈ ಚಿತ್ರವು 2019 ರಲ್ಲಿ ಬಿಡುಗಡೆಯಾಗಿ 53.1 ಕೋಟಿ ರೂ ಕೋಟಿ ಗಳಿಸಿತ್ತು. ‘ಅವೆಂಜರ್ಸ್’ ದಾಖಲೆಯನ್ನ ಹಿಂದಿಕ್ಕುವಲ್ಲಿ ‘ಅವತಾರ್ 2’ ವಿಫಲವಾಗಿದೆ.
‘ಅವತಾರ್ 2’ ಚಿತ್ರ 2009 ರಲ್ಲಿ ಬಿಡುಗಡೆಯಾದ ‘ಅವತಾರ್’ ಚಿತ್ರದ ಮುಂದುವರಿದ ಭಾಗವಾಗಿದ್ದು, 160 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪ್ರಸ್ತುತ ಲಭ್ಯವಿರುವ ಎಲ್ಲಾ ಸ್ವರೂಪಗಳಲ್ಲಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತಿದೆ. ಸುಮಾರು 16 ಸಾವಿರ ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.
‘ಅವತಾರ್ 2’ ಯಶಸ್ಸಿನ ಮೇಲೆ ‘ಅವತಾರ್ 4’ ಮತ್ತು ‘ಅವತಾರ್ 5’ ಅವಲಂಬಿತವಾಗಿದೆ ಎಂದು ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ. ಒಂದು ವೇಳೆ ಈ ಚಿತ್ರ ಫ್ಲಾಪ್ ಆದರೇ ‘ಅವತಾರ್ 3’ ಮೂಲಕ ಕಥೆಯನ್ನ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
Avatar 2: 41 crores on the first day in India…