Avatar 2 : ಆನ್ ಲೈನ್ ನಲ್ಲಿ ಅವತಾರ್ 2 ಸಿನಿಮಾ ಟ್ರೈಲರ್ ಲೀಕ್..
ಸಿನಿಪ್ರಿಯರು ಜಾಕತ ಪಕ್ಷಿಯಂತೆ ಕಾಯುತ್ತಿರುವ ಸಿನಿಮಾ ಅವತಾರ್ 2.
2009ರಲ್ಲಿ ತೆರೆಕಂಡ ‘ಅವತಾರ್’ ಹಾಲಿವುಡ್ ದಂತಕಥೆ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ರಚಿಸಿದ ವಿಜುವಲ್ ವಂಡರ್.
ಈ ಸಿನಿಮಾದ ಸೀಕ್ವೆಲ್ ಆಗಿ ಬರುತ್ತಿರುವ ಮೂವಿ ‘ಅವತಾರ್: ದಿ ವೇ ಆಫ್ ವಾಟರ್’.
ಈ ಚಿತ್ರವು ಡಿಸೆಂಬರ್ 16 ರಂದು ವಿಶ್ವದಾದ್ಯಂತ 160 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಅಲ್ಲದೆ, ‘ಡಾಕ್ಟರ್ ಸ್ಟ್ರೇಂಜ್: ಇನ್ ದಿ ಮಲ್ಟಿವರ್ಸಸ್ ಆಫ್ ಮ್ಯಾಡ್ನೆಸ್’ ಚಿತ್ರದ ಬಿಡುಗಡೆಯಂದೇ ಮೇ ಆರರಂದು ಅವತಾರ್ 2 ಟ್ರೇಲರ್ ರಿಲೀಸ್ ಆಗಲಿದೆ.
ಆದರೆ, ‘ಅವತಾರ್ 2’ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನೀವು ಥಿಯೇಟರ್‌ಗಳಲ್ಲಿ ಆನಂದಿಸಲು ಬಯಸುವ ಈ ಚಿತ್ರದ ಟ್ರೇಲರ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂದು ವರದಿಯಾಗಿದೆ.
ಸೋರಿಕೆಯ ತುಣುಕಿನ ಲಿಂಕ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಆದರೆ ಆ ಲಿಂಗ್ ಗಳನ್ನು ಟ್ವಿಟ್ಟರ್ ಡಿಲೀಟ್ ಮಾಡಿದೆ. avatar-2-way-water-trailer-leaked