Avatar: The Way of Water : KGF 2 ದಾಖಲೆ ಮುರಿಯುವಲ್ಲಿ ವಿಫಲವಾದ ಅವತಾರ್ 2
ಹಲವು ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿರುವ ಅವತಾರದ 2 ಚಿತ್ರ ಭಾರತದಲ್ಲೂ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅದರಲ್ಲೂ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿರುವುದರಿಂದ ಚಿತ್ರದ ಕ್ರೇಜ್ ಇನ್ನೂ ಹೆಚ್ಚಾಗಿದೆ.
Avatar: The Way of Water ಚಿತ್ರ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನ ಕಾಣುವ ಮೂಲಕ ಈ ಸಿನಿಮಾ ಕನ್ನಡದ ಜೇಮ್ಸ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ದಾಖಲೆಗಳನ್ನು ಮುರಿದಿದೆ. ಬೆಂಗಳೂರಿನಲ್ಲಿ ಅತಿಹೆಚ್ಚಿನ ಶೋ ಪಡೆದ ಚಿತ್ರಗಳ ಪೈಕಿ 2ನೇ ಸ್ಥಾನ ಗಳಿಸಿದೆ. 2022ರಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೇ ಅತಿಹೆಚ್ಚು ಪ್ರದರ್ಶನ ಕಂಡ ಟಾಪ್ 10ರ ಪಟ್ಟಿಯಲ್ಲಿ ಈ ಸಿನಿಮಾ ಅಗ್ರ ಸ್ಥಾನದಲ್ಲಿದೆ..
ಆದ್ರೆ KGF 2 ದಾಖಲೆಯ ಬ್ರೇಕ್ ಮಾಡುವಲ್ಲಿ ಅವತಾರ್ ವಿಫಲವಾಗಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಕಂಡ ಚಿತ್ರಗಳ ಪಟ್ಟಿಯಲ್ಲಿ ಈಗಲೂ ಕೆಜಿಎಫ್- ಚಾಪ್ಟರ್ 2 ಮೊದಲ ಸ್ಥಾನದಲ್ಲಿದೆ.. 1037 ಪ್ರದರ್ಶನಗಳು ಕಂಡಿದೆ. ಅವತಾರ್ – ದಿ ವೇ ಆಫ್ ವಾಟರ್ 1014 ಪ್ರದರ್ಶನಗಳ ಕಾಣುವ ಮೂಲಕ 2 ನೇ ಸ್ಥಾನದಲ್ಲಿದೆ.. ವಿಕ್ರಾಂತ್ ರೋಣ – 987 ಪ್ರದರ್ಶನಗಳ ಮೂಲಕ 3 ನೇ ಸ್ಥಾನ. ಬೀಸ್ಟ್ 4ನೇ ಸ್ಥಾನRRR 5 ನೇ ಸ್ಥಾನದಲ್ಲಿದೆ.
ಉಳಿದಂತೆ , ಜೇಮ್ಸ್ , ವಾಲಿಮೈ , ಲೈಗರ್ , ಮಲ್ಟಿವರ್ಸ್ ಆಫ್ ಮ್ಯಾಡ್ ನೆಸ್ , ಸರ್ಕಾರು ವಾರಿ ಪಾಟ ನಂತರದ ಸ್ಥಾನಗಳಲ್ಲಿವೆ..
Avatar: The Way of Water failed to break the KGF 2 record