Kodagu | ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 53.01 ಮಿ.ಮೀ. ಮಳೆ
ಮಡಿಕೇರಿ : ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 53.01 ಮಿ.ಮೀ. ಮಳೆಯಾಗಿದೆ.
ಕಳೆದ ವರ್ಷ ಇದೇ ದಿನ 2.77 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ 779.73 ಮಿ.ಮೀ ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಇಂದು ಸರಾಸರಿ 100.25 ಮಿ.ಮೀ. ಮಳೆಯಾಗಿದೆ.
ಜನವರಿಯಿಂದ ಇಲ್ಲಿಯವರೆಗಿನ 1118.89 ಮಿ.ಮೀ ಮಳೆಯಾಗಿದೆ.
ವಿರಾಜಪೇಟೆ ತಾಲೂಕಿನಲ್ಲಿ ಇಂದು ಸರಾಸರಿ 25.87 ಮಿ.ಮೀ ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗಿನ 661.71 ಮಿ.ಮೀ.ರಷ್ಟು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಇಂದು ಸರಾಸರಿ ಮಳೆ 32.90 ಮಿ.ಮೀ. ಮಳೆಯಾಗಿದೆ.
ಜನವರಿಯಿಂದ ಇಲ್ಲಿಯವರೆಗಿನ 558.57 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ದಾಖಲಾಗಿರುವ ಮಳೆ ವಿವರಗಳನ್ನು ನೋಡುವುದಾದ್ರೆ ಮಡಿಕೇರಿ ಕಸಬಾ 73.80, ನಾಪೋಕ್ಲು 70.20, ಸಂಪಾಜೆ 148,
ಭಾಗಮಂಡಲ 109, ವಿರಾಜಪೇಟೆ ಕಸಬಾ 28, ಹುದಿಕೇರಿ 29, ಶ್ರೀಮಂಗಲ 52.20, ಪೊನ್ನಂಪೇಟೆ 12, ಅಮ್ಮತಿ 18,
ಬಾಳೆಲೆ 16, ಸೋಮವಾರಪೇಟೆ ಕಸಬಾ 34.80, ಶನಿವಾರಸಂತೆ 18, ಶಾಂತಳ್ಳಿ 72, ಕೊಡ್ಲಿಪೇಟೆ 10.40, ಕುಶಾಲನಗರ 26, ಸುಂಟಿಕೊಪ್ಪ 36.20 ಮಿ.ಮೀ. ಮಳೆಯಾಗಿದೆ.








