ಆ ಕ್ರೆಡಿಡ್ ಎಲ್ಲಾ ದ್ರಾವಿಡ್ ಸರ್ ಗೆ ಹೋಗಬೇಕು
ರಾಜ್‌ಕೋಟ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 89 ರನ್‌ಗಳ ಜಯ ಸಾಧಿಸಿದೆ.
ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ.
ರಾಜ್ ಕೋಟ್ ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಯುವ ವೇಗಿ ಅವೇಶ್ ಖಾನ್ ನಾಲ್ಕು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯದ ಬಳಿಕ ಮಾತನಾಡಿದ ಅವೇಶ್ ಖಾನ್, ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದರು.

ನಾಲ್ಕು ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಈ ಎಲ್ಲಾ ಕ್ರೆಡಿಟ್ ದ್ರಾವಿಡ್ ಅವರಿಗೆ ಸಲ್ಲುತ್ತದೆ.
ಅವರು ಎಲ್ಲರಿಗೂ ತಂಡದಲ್ಲಿ ಅವಕಾಶ ನೀಡುತ್ತಾರೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಅವರು ಮುಂದಿನ ಪಂದ್ಯದಲ್ಲಿ ನಮಗೆ ಅವಕಾಶ ನೀಡುತ್ತಾರೆ.
ಯಾಕೆಂದರೇ ಕೆಲವು ಪಂದ್ಯಗಳಲ್ಲಿ ಆಟಗಾರನ ಪ್ರತಿಭೆಯನ್ನು ಅಂದಾಜಿಸಲಾಗುವುದಿಲ್ಲ.
ಪ್ರತಿ ಒಬ್ಬರಿಗೂ ತಮ್ಮನ್ನು ತಾವು ಸಾಭೀತುಪಡಿಸಿಕೊಳ್ಳಲು ತಕ್ಕ ಅವಕಾಶಗಳನ್ನು ದ್ರಾವಿಡ್ ಸರ್ ನೀಡುತ್ತಾರೆ ಎಂದು ಆವೇಶ್ ಖಾನ್ ಹೇಳಿದ್ದಾರೆ.








