ಕೈಬೆರಳಿಗೆ ಗಾಯ ಮಾಡಿಕೊಂಡ ಆವೇಶ್ ಖಾನ್… ಇಂಗ್ಲೆಂಡ್ ಸರಣಿಯಿಂದ ಹೊರನಡೆದ ಯುವ ವೇಗಿ..!

1 min read
avesh khan team india saakshatv

ಕೈಬೆರಳಿಗೆ ಗಾಯ ಮಾಡಿಕೊಂಡ ಆವೇಶ್ ಖಾನ್… ಇಂಗ್ಲೆಂಡ್ ಸರಣಿಯಿಂದ ಹೊರನಡೆದ ಯುವ ವೇಗಿ..!

avesh khan team india saakshatvಟೀಮ್ ಇಂಡಿಯಾದ ಯುವ ವೇಗಿ ಆವೇಶ್ ಖಾನ್ ಅವರು ಗಾಯಗೊಂಡಿದ್ದಾರೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಕನಸು ಕಾಣುತ್ತಿದ್ದ ಆವೇಶ್ ಖಾನ್ ಅವರಿಗೆ ಭಾರೀ ನಿರಾಸೆಯಾಗಿದೆ. ಅಭ್ಯಾಸ ಪಂದ್ಯದ ವೇಳೆ ಅವೇಶ್ ಖಾನ್ ಅವರು ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸೆಲೆಕ್ಟ್ ಕೌಂಟಿ ತಂಡದ ಪರ ಆಡುತ್ತಿದ್ದ ಆವೇಶ್ ಖಾನ್ ಅವರು ಹನುಮ ವಿಹಾರಿ ಬಲವಾಗಿ ಹೊಡೆದ ಚೆಂಡನ್ನು ಹಿಡಿಯುವ ಪ್ರಯತ್ನ ನಡೆಸಿದ್ದರು. ಆಗ ಆವೇಶ್ ಖಾನ್ ಅವರ ಕೈ ಬೆರಳಿಗೆ ಗಾಯವಾಗಿ. ಈ ಗಾಯದಿಂದ ಚೇತರಿಸಿಕೊಳ್ಳಲು ಆವೇಶ್ ಖಾನ್ ಅವರು ಕನಿಷ್ಠ ಒಂದು ತಿಂಗಳಾದ್ರೂ ಬೇಕು. ಹೀಗಾಗಿ ಆಗಸ್ಟ್ 4ರಿಂದ ಆರಂಭವಾಗುವ ಟೆಸ್ಟ್ ಸರಣಿಯಿಂದ ಆವೇಶ್ ಖಾನ್ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ಮತ್ತು ಭಾರತ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
avesh khan team india saakshatvಈಗಾಗಲೇ ಶುಬ್ಮನ್ ಗಿಲ್ ಅವರು ಗಾಯದಿಂದ ಸರಣಿಯಿಂದ ಹೊರನಡೆದಿದ್ದಾರೆ. ರಿಷಬ್ ಪಂತ್ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅದರ ಮಧ್ಯೆ ಆವೇಶ್ ಖಾನ್ ಗಾಯಗೊಂಡಿರುವುದು ತಂಡಕ್ಕೆ ಹೆಚ್ಚುವರಿ ಬೌಲರ್ ನ ಆಗತ್ಯವೂ ಇದೆ.
ಮಧ್ಯ ಪ್ರದೇಶದ ವೇಗಿ ಆವೇಶ್ ಖಾನ್ ಅವರಯ 26 ಪ್ರಥಮ ದರ್ಜೆಯ ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದ್ದರು. 24ರ ಹರೆಯದ ಯುವ ವೇಗಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳಿದ್ದವು. ಆದ್ರೆ ಕೈಬೆರಳಿನ ಗಾಯ ಆವೇಶ್ ಖಾನ್‍ಗೆ ನಿರಾಸೆಯನ್ನುಂಟು ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd