ಕಂಟೆಂಟ್ ಕ್ರಿಯೇಷನ್ ಎನ್ನುವುದು ಕೋವಿಡ್ ಬಳಿಕ ಪ್ರಾರಂಭವಾಗಿ, ಬೂಮ್ ಆಗುತ್ತಿರುವ ವಿಭಾಗ. ಸದ್ಯ ಈ ವಿಭಾಗದಲ್ಲಿ ಅತ್ಯುತ್ತಮರನ್ನು ಆಯ್ಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ವಿತರಿಸಿದ್ದಾರೆ.
ಅತ್ಯುತ್ತಮ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ಕನ್ನಡತಿ ‘ಅಯ್ಯೋ ಶ್ರದ್ಧಾ’ ಖ್ಯಾತಿಯ ಶ್ರದ್ಧಾ ಪಡೆದುಕೊಂಡಿದ್ದಾರೆ. ಶ್ರದ್ಧಾ ಜೈನ್, ಅಯ್ಯೋ ಶ್ರದ್ಧಾ ಚಾನೆಲ್ ಮೂಲಕ ಹಲವಾರು ಕಾಮಿಡಿ ಕಿರು ವಿಡಿಯೋಗಳನ್ನು ಮಾಡಿದ್ದಾರೆ. ವಿಡಿಯೋಗಳಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದಾರೆ.
ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿಯೂ ವಿಡಿಯೋ ಮಾಡುವ, ಸಾಮಾಜಿಕ ವಿಷಯಗಳು, ಮಧ್ಯಮ ವರ್ಗದ ಸಮಸ್ಯೆಗಳನ್ನು ಇಟ್ಟುಕೊಂಡು ವಿಡಿಯೋ ಮಾಡುವ ಶ್ರದ್ಧಾ ಜೈನ್ ಗೆ ಪ್ರಧಾನಿ ಅತ್ಯಂತ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪ್ರಶಸ್ತಿ ನೀಡಿ ಮಾತನಾಡಿದ ಪ್ರಧಾನಿ, ಎಷ್ಟೇ ಒಳ್ಳೆಯ ತರಕಾರಿ ತಂದು ಅಡುಗೆ ಮಾಡಿದರೂ ಸಹ ಅದಕ್ಕೆ ಒಗ್ಗರಣೆ ಬಿದ್ದರಷ್ಟೆ ರುಚಿ. ಹಾಸ್ಯ ಸಹ ಒಗ್ಗರಣೆಯ ಕಾರ್ ಮಾಡುತ್ತದೆ’ ಎಂದು ಶ್ರದ್ಧಾರ ಕಂಟೆಂಟ್ ಅನ್ನು ಕೊಂಡಾಡಿದ್ದಾರೆ. ಶ್ರದ್ಧಾ ಅಷ್ಟೇ ಅಲ್ಲದೇ, ಹಲವಾರು ಉತ್ತಮ ಕಂಟೆಂಟ್ ಕ್ರಿಯೇಟರ್ಸ್ ಗುರಿತು ಪ್ರಶಸ್ತಿ ನೀಡಲಾಗಿದೆ.








