ಇದೇ ತಿಂಗಳ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಯೋಧ್ಯೆ ಸದ್ಯ ಪೊಲೀಸ್ ಸರ್ಪಗಾವಲಿನಲ್ಲಿದೆ.
ಅಯೋಧ್ಯೆ ವಿವಾದದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
1528 : ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ನಿಂದ ಮಸೀದಿ ನಿರ್ಮಾಣ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಿದ ಎಂಬುದು ಆರೋಪ.
1853 : ನಿರ್ಮೋಹಿ ಅಖಾಡದಿಂದ ಬಲವಂತವಾಗಿ ಬಾಬ್ರಿ ಮಸೀದಿ ವಶಕ್ಕೆ. ಈ ಮೂಲಕ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಕೋಮು ಗಲಭೆ ಸೃಷ್ಠಿ.
1859 : ವಿವಾದಿತ ಸ್ಥಳದ ಸುತ್ತ ತಂತಿಬೇಲಿ ಹಾಕಿಸಿದ್ದ ಬ್ರಿಟೀಷ್ ಸರ್ಕಾರ ಒಳಾಂಗಣದ ಭಾಗವನ್ನು ಮುಸ್ಲೀಮರಿಗೂ, ಹೊರಾಂಗಣ ಭಾಗವನ್ನು ಹಿಂದೂಗಳಿಗೂ ನೀಡಿ ಕೈ ತೊಳೆದುಕೊಂಡಿತ್ತು.
1885 : ಹಿಂದೂ ಪೂಜಾರಿ ಮಹಾಂತ ರಘುವರ್ ದಾಸ್ ರಿಂದ ವಿವಾದಿತ ಸ್ಥಳದ ಮಾಲೀಕತ್ವಕ್ಕಾಗಿ ಮತ್ತು ಮಸೀದಿಯ ಹೊರಗಿನ ರಾಮ ಚಬುತ್ರಾಕ್ಕೆ ಮೇಲ್ಛಾವಣಿ ಹಾಕಲು ಅವಕಾಶ ಕೋರಿ ಫಜಿಯಾಬಾದ್ ಕೋರ್ಟ್ ಗೆ ಅರ್ಜಿ, ಅರ್ಜಿ ತಿರಸ್ಕೃತ.
1949 : ಡಿಸೆಂಬರ್ ನಲ್ಲಿ ವಿವಾದಿತ ಸ್ಥಳದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ. ಉಭಯ ಕಡೆಯಿಂದ ಕೋರ್ಟ್ ನಲ್ಲಿ ಅರ್ಜಿ, ಅಯೋಧ್ಯೆಯನ್ನು ವಿವಾದಿತ ಭೂಮಿಯೆಂದು ಪರಿಗಣಿಸಿ, ನಿರ್ಭಂದನೆ ಹೇರಿದ ಕೋರ್ಟ್
1950 : ರಾಮ್ ಲಲ್ಲಾ ಪೂಜೆ ಹಾಗೂ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ನಾಲ್ಕು ಪ್ರತ್ಯೇಕ ಅರ್ಜಿಗಳು ಕೋರ್ಟ್ ಮೆಟ್ಟಿಲೇರಿದವು.
1959 : ಮಂದಿರವನ್ನು ತಮ್ಮ ಸುಪರ್ದಿಗೆ ನೀಡಿ ಎಂದು ಕೋರಿ ಫಜಿಯಾಬಾದ್ ನ್ಯಾಯಾಲಯಕ್ಕೆ ನಿರ್ಮೊಹಿ ಅಖಾಡ ಅರ್ಜಿ
1961 : ಅಯೋಧ್ಯೆ ಭೂಮಿಯನ್ನು ತಮ್ಮ ವಶಕ್ಕೆ ಕೋರಿ ಮತ್ತು ರಾಮ ಮೂರ್ತಿಯನ್ನು ತೆಗೆಯಲು ಅನುಮತಿ ಕೋರಿ ಕೋರ್ಟ್ ಗೆ ಸುನ್ನಿ ವಾಕ್ಫ ಕಮಿಟಿ ಅರ್ಜಿ.
1984 : ವಿಶ್ವಹಿಂದೂ ಪರಿಷತ್ ನಿಂದ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಚಾರ ಸಭೆ ಆರಂಭ. ಎಲ್. ಕೆ.ಅಡ್ವಾಣಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದಿಂದ ರಾಮ ಮಂದಿರ ಅಭಿಯಾನ ಆರಂಭ.
1986 : ಮಸೀದಿ ಗೆಟ್ ಗಳನ್ನು ತೆರೆದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ಫಾಜಿಯಾಬಾದ್ ಕೋರ್ಟ್. ನ್ಯಾಯಾಲಯದ ಈ ತೀರ್ಪು ವಿರೋಧಿಸಿದ ಬಾಬ್ರಿ ಮಸೀದಿ ಕಮಿಟಿ.
1989 : ಬಾಬ್ರಿ ಮಸೀದಿ ಪಕ್ಕದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿದ ವಿಶ್ವಹಿಂದೂ ಪರಿಷತ್. ನಾಲ್ಕು ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗ.
1990 : ಸೋಮನಾಥ್ ದಿಂದ ಅಯೋಧ್ಯೆವರೆಗೆ ರಥ ಯಾತ್ರೆ ಆಯೋಜಿಸಿ ರಾಮ ಜನ್ಮ ಭೂಮಿ ಕುರಿತು ಜನರಲ್ಲಿ ಅರಿವು ಮೂಡಿಸಲು ಮುಂದಾದ ಆಗಿನ ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ.
1991 : ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ.
ಡಿಸೆಂಬರ್ 05, 1992 : ಕರ್ನಾಟಕ ಸೇರಿದಂತೆ ರಾಷ್ಟ್ರದ ನಾನಾ ಮೂಲೆಗಳಿಂದ ವಿವಾದಿದ ಸ್ಥಳಕ್ಕೆ ಆಗಮಿಸಿದ ಕರಸೇವಕರು. ಕರಸೇವಕರನ್ನು ಉದ್ದೇಶಿಸಿ ಉದ್ರೇಕಕಾರಿ ಭಾಷಣ ಮಾಡಿದ್ದ ಎಲ್.ಕೆ. ಅಡ್ವಾಣಿ.
ಡಿಸೆಂಬರ್ 06, 1992 : ವಿಎಚ್‌ಪಿ, ಶಿವಸೇನೆ ಹಾಗೂ ಬಿಜೆಪಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ, ರಾಷ್ಟ್ರವ್ಯಾಪಿ ಹರಡಿದ ಕೋಮುಗಲಭೆ ಸುಮಾರು 2000 ಮಂದಿ ಬಲಿ. ಪಾಕಿಸ್ತಾನ, ಬಾಂಗ್ಲಾದೇಶಕ್ಕೂ ವ್ಯಾಪಿಸಿದ ಕೋಮುಗಲಭೆಗೆ ಅಲ್ಲಿನ ಹಿಂದೂಗಳು ತತ್ತರ. ನೆಲಕ್ಕುರುಳಿದ ಹಿಂದೂ ದೇವಾಲಯಗಳು.
1993 : ಎಲ್.ಕೆ.ಅಡ್ವಾಣಿ ಸೇರಿ ಹಲವರ ಮೇಲೆ ಚಾರ್ಜಶೀಟ್ ಹಾಕಿದ ಸಿಬಿಐ.
1994 : ಪ್ರಕರಣದ ನಿರಂತರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಭಾಗೀಯ ಪೀಠ.
ಸೆಪ್ಟೆಂಬರ್ 27, 1994 : ಇಸ್ಲಾಂ ಧರ್ಮದ ಪ್ರಕಾರ ನಮಾಜ್ ಮಾಡಲು ಮಸೀದಿಯ ಅಗತ್ಯವಿಲ್ಲ, ಬಯಲು ಪ್ರದೇಶದಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟಿದ್ದ ಅಲಹಾಬಾದ್ ಹೈಕೋರ್ಟ್.
1997 : ಎಲ್.ಕೆ.ಅಡ್ವಾಣಿ ಸೇರಿದಂತೆ 49 ಜನರ ಮೇಲೆ ಅಯೋಧ್ಯೆ ವಿವಾದದ ಕುರಿತು ಆರೋಪಪಟ್ಟಿ ಬಿಡುಗಡೆ ಮಾಡಿದ ವಿಶೇಷ ನ್ಯಾಯಾಲಯ.
2001 : ಅಡ್ವಾಣಿ ಸೇರಿದಂತೆ 13 ಜನರ ಮೇಲಿನ ಪಿತೂರಿ ಆರೋಪವನ್ನು ತಳ್ಳಿಹಾಕಿದ ನ್ಯಾಯಾಧೀಶ ಎಸ್.ಕೆ.ಶುಕ್ಲಾ.
ಐಪಿಸಿ ಸೆಕ್ಷನ್ 197 (ಮಸೀದಿ ಧ್ವಂಸ) ಹಾಗೂ 198 (ಕ್ರಿಮಿನಲ್ ಪಿತೂರಿ) ಎರಡನ್ನೂ ಪ್ರತ್ಯೇಕಿಸಿ ಆದೇಶ.
ಡಿಸೆಂಬರ್ 6, 2001 : ವಿಎಚ್‌ಪಿ ಯಿಂದ ಮತ್ತೆ ರಾಮ ಜನ್ಮಭೂಮಿಯಲ್ಲಿ ಮಂದಿರ ಸ್ಥಾಪನೆಯ ಸಂಕಲ್ಪ. ಬಾಬರಿ ಮಸೀದಿ ಧ್ವಂಸ ವಾರ್ಷಿಕ ದಿನದ ಆಚರಣೆ, ಹಲವೆಡೆ ಗಲಭೆ, ಹಿಂಸಾಚಾರ.
2002: ಅಯೋಧ್ಯಾ ಭೂ ವಿವಾದದ ಕುರಿತು ವರದಿ ನೀಡಲು ಪುರಾತತ್ವ ಇಲಾಖೆಗೆ ಸೂಚನೆ ನೀಡಿದ ಲಕ್ನೌನ ಅಲಹಾಬಾದ್ ಪೀಠ.
ಫೆಬ್ರವರಿ 2002 : ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಸೇರ್ಪಡೆ. ಅಯೋಧ್ಯೆಯಿಂದ ರೈಲಿನಲ್ಲಿ ಹಿಂದಿರುಗುತ್ತಿದ್ದ 58 ಜನ ಹಿಂದೂ ಕಾರ್ಯಕರ್ತರ ಹತ್ಯೆ. ಗೋಧ್ರಾ ಹಿಂಸಾಚಾರಕ್ಕೆ ನಾಂದಿ.
ಮಾರ್ಚ್ 2002 : ಗುಜರಾತ್ ನ ಗೋಧ್ರಾದಲ್ಲಿ ಮೇರೆ ಮೀರಿದ ಹಿಂಸಾಚಾರ. ಸುಮಾರು 1000 ಕ್ಕೂ ಅಧಿಕ ಜನರ ಹತ್ಯೆ. ಇದರಲ್ಲಿ ಹೆಚ್ಚಿನಂಶ ಮುಸ್ಲಿಮರು.
ಏಪ್ರಿಲ್ 2002 : ಮೂವರು ಹೈಕೋರ್ಟ್ ಜಡ್ಜ್ ಗಳಿದ್ದ ಪೀಠದಿಂದ ವಿವಾದಿತ ಧಾರ್ಮಿಕ ಸ್ಥಳದ ವಿಚಾರಣೆ.
ಜನವರಿ 2003 : ವಿವಾದಿತ ಸ್ಥಳ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಆರಂಭ.
ಆಗಸ್ಟ್ 2003 : ಮಸೀದಿಯ ಕೆಳಗೆ ರಾಮನ ದೇವಾಲಯ ಇತ್ತು ಎನ್ನುವುದಕ್ಕೆ ಕುರುಹುಗಳಿವೆ ಎಂದು ಖಚಿತ ಪಡಿಸಿದ ಭೂ ಗರ್ಭ ಶಾಸ್ತ್ರಜ್ಞರು. ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ಘೋಷಿಸಿದ ವಾಜಪೇಯಿ. ಆದರೆ ಸಮೀಕ್ಷೆಯನ್ನು ಅಲ್ಲಗೆಳೆದ ಮುಸ್ಲಿಂ ಮುಖಂಡರು.
ಸೆಪ್ಟೆಂಬರ್ 2003 : ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಏಳು ಜನ ಹಿಂದೂ ನಾಯಕರ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ.
ನವೆಂಬರ್ 2004 : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾನಿ ಕೈವಾಡ ಇಲ್ಲ ಎಂಬ ಹಿಂದಿನ ತೀರ್ಪು ಮರು ಪರಿಶೀಲನೆ ಅರ್ಜಿಯನ್ನು ಸ್ವೀಕರಿಸಿದ ಅಲಹಾಬಾದ್ ಹೈಕೋರ್ಟ್.
ಜುಲೈ 2005 : ಶಂಕಿತ ಮುಸ್ಲಿಂ ಉಗ್ರರಿಂದ ವಿವಾದಿತ ಸ್ಥಳದ ಮೇಲೆ ದಾಳಿ. ಭದ್ರತಾ ಪಡೆಯಿಂದ ಐವರ ಹತ್ಯೆ, ಆರನೇ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ಜೂನ್ 2009 : ಸುಮಾರು 17 ವರ್ಷಗಳ ನಂತರ ಲೆಬ್ರಹಾನ್ ಸಮಿತಿಯಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆ.
ನವೆಂಬರ್ 2009 : ಮಸೀದಿ ಧ್ವಂಸ ಪ್ರಕರಣದಲ್ಲಿ ಹಿಂದೂ ಧರ್ಮ ಪಾಲಕ ಹಾಗೂ ಬಿಜೆಪಿ ನಾಯಕರ ಕೈವಾಡವಿದೆ ಎಂದ ಲೆಬ್ರಹಾನ್ ಸಮಿತಿ ವರದಿ ಬಗ್ಗೆ ಸಂಸತ್ತಿನಲ್ಲಿ ಭಾರೀ ಗದ್ದಲ.
2010 : ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಮೂರನೇ ಒಂದು ಭಾಗವನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ಸುರ್ಪದಿಗೆ, ಮೂರನೇ ಒಂದು ಭಾಗವನ್ನು ಸುನ್ನಿ ವಾಕ್ಫ ಕಮಿಟಿಗೆ ಹಾಗೂ ಉಳಿದ ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಲು ಅಲಹಬಾದ್ ಹೈಕೋರ್ಟ್ ತೀರ್ಪು.
2011 : ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಹಿಂದೂ, ಮುಸ್ಲೀಂ ನಾಯಕರು. ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ.
ಮಾರ್ಚ್ 6, 2017 : ಐಪಿಸಿ ಸೆಕ್ಷನ್ 197 ಹಾಗೂ 198 ಜಂಟಿಯಾಗಿ ಪರಿಗಣಿಸಿ, ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದರ ಬಗ್ಗೆ ಸಿಬಿಐ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ.
ಮಾರ್ಚ್ 22, 2017 : ಎರಡೂ ಕೋಮಿನ ಮುಖಂಡರು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ವ್ಯಾಜ್ಯವನ್ನು ಬಗೆಹರಿಸಿಕೊಳ್ಳುವುದಾದರೆ ಮಧ್ಯಸ್ಥಿಕೆದಾರರನ್ನು ನೇಮಿಸಲು ಸಿದ್ಧ- ಸುಪ್ರೀಂ ಕೋರ್ಟ್.
ಏಪ್ರಿಲ್ 19, 2017 : ಎಲ್.ಕೆ.ಅಡ್ವಾಣಿ ಸೇರಿದಂತೆ 13 ಜನ ಆರೋಪಿಗಳ ಮೇಲಿನ ಆರೋಪ ಪಟ್ಟಿ ರದ್ದುಗೊಳಿಸದಂತೆ ಸಿಬಿಐ ಕೋರಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ, ಕಲ್ಯಾಣ್ ಸಿಂಗ್ ಹೊರತು ಪಡಿಸಿ ಉಳಿದವರ ಮೇಲೆ ವಿಚಾರಣೆ ನಡೆಸಲು ಆದೇಶ.
ಮೇ 30, 2017 : ಎಲ್. ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ 12 ಜನರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲು ಮಾಡಿಕೊಂಡ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ. ಈ ವಿಚಾರಣೆ ಈಗಲೂ ನಡೆಯುತ್ತಲೇ ಇದೆ.
ಡಿಸೆಂಬರ್ 05, 2017 : 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 13 ಅರ್ಜಿಗಳನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದ ಸುನ್ನಿ ಮುಸ್ಲಿಂ ಸಮುದಾಯ.
2018 : ಜುಲೈನಲ್ಲಿ 1994ರ ಮಸೀದಿ ಇಸ್ಲಾಂನ ಅಂತರ್ಗತ ಭಾಗವಲ್ಲ ಎಂಬ ತೀರ್ಪನ್ನು ಪ್ರಶ್ನಿಸುವ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ.
ಸೆಪ್ಟೆಂಬರ್ 27, 2018 : ಮುಸ್ಲಿಂ ಧರ್ಮೀಯರು ನಮಾಜು ಮಾಡಲು ಮಸೀದಿಯೇ ಬೇಕಿಲ್ಲ. ಬಯಲು ಪ್ರದೇಶದಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ 1994ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿತ್ತು.
ಡಿಸೆಂಬರ್ 24, 2018 : ಅಯೋಧ್ಯೆ ವಿವಾದ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜನವರಿ 4 ರಿಂದ ವಿಚಾರಣೆ ನಡೆಸುವುದಾಗಿ ತಿಳಿಸಿದ ದ್ವಿಸದಸ್ಯ ಪೀಠ.
2019 : ಜನವರಿ 8ರಂದು ಅಯೋಧ್ಯೆ ವಿವಾದ ವಿಚಾರಣೆ ನಡೆಸಲು ಪಂಚ ಸದಸ್ಯ ಪೀಠ ರಚನೆ, ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದ ಪೀಠ
2019 : ಮಾರ್ಚ್ 8 ರಂದು ಸಂಧಾನ ಸಮಿತಿ ರಚಿಸಿ, ಮಾತುಕತೆಯ ಮೂಲಕ ಪರಿಹಾರ ಕಂಡುಕೊಂಡು 8 ವಾರಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಸೂಚನೆ.
2019 : ಆಗಸ್ಟ್ 1ರಂದು ಕೋರ್ಟ್ ಸಂಧಾನ ಸಮಿತಿಯಿಂದ ವರದಿ ಸಲ್ಲಿಕೆ. ಸಂಧಾನ ವಿಫಲವಾಗಿದೆ ಎಂದ ಕೋರ್ಟ್. ಪ್ರತಿದಿನ ವಿಚಾರಣೆ ನಡೆಸಿ ಪ್ರಕರಣ ಮುಕ್ತಾಯಗೊಳಿಸಲು ಮುಂದಾದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ.
2019: ಆಗಸ್ಟ್ 6ರಿಂದ ಪ್ರತಿ ದಿನ 40 ದಿನಗಳ ಸತತ ವಿಚಾರಣೆ ನಡೆಸಿದ ಐದು ಮಂದಿಯ ಸಂವಿಧಾನ ಪೀಠ, ಅಕ್ಟೋಬರ್ 16ರಂದು ವಿಚಾರಣೆ ಮುಕ್ತಾಯ.
2019: ನವೆಂಬರ್ 9ಕ್ಕೆ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಪಂಚ ಸದಸ್ಯಪೀಠ, 2.77 ಎಕರೆ ವಿವಾದಿತ ಜಮೀನು ರಾಮ್‌ಲಲ್ಲಾಗೆ ಸೇರಿದ್ದು , ಮೂರು ತಿಂಗಳೊಳಗೆ ಟ್ರಸ್ಟ್ ರಚಿಸಿ ಸರಕಾರವೇ ಮಂದಿರ ನಿರ್ಮಿಸಬೇಕು . ಜೊತೆಗೆ ಸುನ್ನಿ ವರ್ಕ್ ಬೋರ್ಡ್ಗೆ ಮಸೀದಿ ನಿರ್ಮಾಣ ಮಾಡಲು 5 ಎಕರೆ ಭೂಮಿ ನೀಡಬೇಕು ಎಂದು ಆದೇಶ.