ಆಯುರ್ವೇದ ಸಾಮರ್ಥ್ಯ ಬಳಸಿಕೊಳ್ಳಲು ಸತತ ಪ್ರಯತ್ನ – ಸರ್ಬಾನಂದ್ ಸೋನೋವಾಲ್
ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್ ಅವರು ಆಯುರ್ವೇದದಲ್ಲಿನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರ್ಕಾರವು ಸತತ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ವಂಧನ್ ಯೋಜನೆ ಅನುಷ್ಠಾನದ ಮೂಲಕ ಅರಣ್ಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಔಷಧೀಯ ಗಿಡಮೂಲಿಕೆಗಳನ್ನು ಗುರುತಿಸಲು ಮತ್ತು ಸಂಗ್ರಹಿಸಲು ಬೃಹತ್ ಪ್ರಯತ್ನಗಳನ್ನು ಮಾಡುತ್ತಿದೆ.
242 ಔಷಧೀಯ ತಳಿಗಳನ್ನು ವಿಶೇಷವಾಗಿ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಆಯುಷ್ನಲ್ಲಿನ ಶ್ರೇಷ್ಠತೆಯ ಕೇಂದ್ರಗಳು ಔಷಧೀಯ ಸಸ್ಯಗಳ ಸಂಶೋಧನೆ ಮತ್ತು ಗುರುತಿಸುವಿಕೆ ಮತ್ತು ಸ್ಥಳೀಯ ಔಷಧಿಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಆಯಾ ರಾಜ್ಯ ಸರ್ಕಾರಗಳಿಂದ ಪ್ರಸ್ತಾವನೆ ಬಂದರೆ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
2020-21 ಮತ್ತು 2021-22ರಲ್ಲಿ 1000 ಆಯುಷ್ ಡಿಸ್ಪೆನ್ಸರಿಗಳನ್ನು ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಆಯುಷ್ ಸಚಿವಾಲಯವು ಅನುಮೋದಿಸಿದೆ ಎಂದು ಶ್ರೀ ಸೋನೊವಾಲ್ ಹೇಳಿದರು.