ಭಾಷಣದಲ್ಲಿ ಕುವೆಂಪು ಅವರ ಕವನ ಉಲ್ಲೇಖಿಸಿದ ರಾಷ್ಟ್ರಪತಿಗಳು
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚೊಚ್ಚಲ ಭಾಷಣದಲ್ಲಿ, ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಕವನವನ್ನ ಉಲ್ಲೇಖಿಸಿ ಮಾತನಾಡಿದರು.
‘ಮಾತೃಭೂಮಿಗಾಗಿ ಮತ್ತು ಸಹ ನಾಗರಿಕರ ಉದ್ಧಾರಕ್ಕಾಗಿ ಸಂಪೂರ್ಣ ತ್ಯಾಗಕ್ಕಾಗಿ ರಾಷ್ಟ್ರ ಕವಿ ಕುವೆಂಪು ಅವರ ಕರೆಯನ್ನು ಉಲ್ಲೇಖಿಸಿದ್ದಾರೆ.
“ನಾನು ಅಳಿವೆ, ನೀನು ಅಳಿವೆ
ನಮ್ಮ ಎಲುಬುಗಳ ಮೇಲೆ
ಮೂಡುವುದು – ಮೂಡುವುದು
ನವ ಭಾರತ ಲೀಲೆ”
ನವ ಭಾರತವನ್ನು ನಿರ್ಮಿಸಲು ಹೊರಟಿರುವ ದೇಶದ ಯುವ ಜನಾಂಗ ಈ ಆದರ್ಶಗಳನ್ನು ಪಾಲಿಸಬೇಕೆಂಬುದು ರಾಷ್ಟ್ರಪತಿ ದ್ರೌಪತಿ ಮುರ್ಮು ಜನತೆಗೆ ಕರೆ ನೀಡಿದ್ದು, ನಮ್ಮ ಪ್ರೀತಿಯ ದೇಶವು ನಮ್ಮ ಜೀವನದಲ್ಲಿ ನಮಗೆ ದೊರೆತಿರುವಂಥ ಎಲ್ಲವನ್ನೂ ನೀಡಿದೆ. ನಮ್ಮ ದೇಶದ ಸುರಕ್ಷತೆ, ಭದ್ರತೆ, ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡಲು ನಾವು ಸಂಕಲ್ಪ ಮಾಡಬೇಕು. ಭವ್ಯ ಭಾರತವನ್ನು ನಿರ್ಮಿಸಿದಾಗ ಮಾತ್ರ ನಮ್ಮ ಅಸ್ತಿತ್ವವು ಅರ್ಥಪೂರ್ಣವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.
Azadi ka Amrit Mahotsav – The President quoted Kuvempu’s poem in the speech