B C Nagesh | ಇದೇ ವರ್ಷದಿಂದ ನೈತಿಕ ಶಿಕ್ಷಣ ನೀಡುವ ಚಿಂತನೆ
ಬೆಂಗಳೂರು : ನೈತಿಕ ಶಿಕ್ಷಣವನ್ನ ನೀಡಲು ಮುಂದಾಗಿದ್ದೇವೆ. ಇದೇ ವರ್ಷದಿಂದ ನೈತಿಕ ಶಿಕ್ಷಣ ನೀಡುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರ ಶಿಕ್ಷಣ ತುಂಬಾ ಪ್ರಾಮುಖ್ಯತೆ ನೀಡುತ್ತಿದೆ. ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿದು ಬಿಟ್ಟರು. ಕೋವಿಡ್ ಟೈಮನಲ್ಲಿ ದೇಶದಲ್ಲಿ ಯಾವ ರಾಜ್ಯಗಳು ಶಾಲೆ ಆರಂಭ ಮಾಡಿರಲಿಲ್ಲ, ಆದ್ರೆ ನಾವು ಕೋವಿಡ್ ಇದ್ರು ಶಾಲೆ ಆರಂಭ ಮಾಡಿದ್ಬಿ. ಇದೀಗ ಹಳ್ಳಿಗಳ ಶಾಲೆಗಳು ಮಕ್ಕಳು ದಾಖಲಾತಿ ಸಂಖ್ಯೆ ಜಾಸ್ತಿ ಆಗ್ತಿದೆ. ಶಿಕ್ಷಣದಲ್ಲಿ ತುಂಬಾ ಬದಲಾವಣೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಗ್ರಾಮಾಂತರ ಮಕ್ಕಳಲ್ಲಿ ಸಮಸ್ಯೆ ಆಗ್ತಿದೆ. ಅದು ಸರಿ ಮಾಡುವಂತ ಕೆಲಸ ಮಾಡ್ತೇವೆ. ಕೊಠಡಿ ರಿಪೇರಿ ಮಾಡುವ ಕೆಲಸ ಮಾಡ್ತಿದ್ದೇವೆ. ರಾಜ್ಯದಲ್ಲಿ 7 ಸಾವಿರ ಕಟ್ಟಡಲು ಮಾಡಲು ಮುಂದಾಗಿದ್ದೇವೆ. ಶೇ.60% ಹೊಸ ಶಿಕ್ಷಕರ ಆಯ್ಕೆ ಮಾಡಿಕೊಳ್ತೇವೆ. 35 ಸಾವಿರ ಅತಿಥಿ ಶಿಕ್ಷಕರನ್ನ ತೆಗೆದುಕೊಳ್ಳುತ್ತೇವೆ. ಕೊರೊನಾದಿಂದ ತುಂಬಾ ಮಕ್ಕಳಿಗೆ ತೊಂದರೆ ಆಗಿದೆ ಅಂತ ವರದಿ ಹೇಳಿದ್ವು. ಪಾಠಗಳನ್ನು ಮಕ್ಕಳು ಮರೆತು ಬಿಟ್ಟಿದ್ದಾರೆ. ಹೀಗಾಗಿ ಕಲಿಕೆ ಚೇತರಿಕೆ ಅಂತ ಮಾಡಿದ್ದೇವೆ. ಮಕ್ಕಳು ಮರೆತಿರುವ ವಿಷಯಗಳ ರೀವಿಜನ್ ಮಾಡ್ತಿದ್ದೇವೆ. ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಲಿಕ ಚೇತರಿಕೆ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು 10 ಮಕ್ಕಳು ಇರುವ ಶಾಲೆಗಳಲ್ಲಿಯೂ ಒಬ್ಬ ಶಿಕ್ಷಕರ ಇದ್ದಾರೆ. 11 ಮಕ್ಕಳಕ್ಕಿಂತ ಹೆಚ್ಚಿರುವ ಶಾಲೆಗಳಲ್ಲಿ ಇಬ್ಬರು ಶಿಕ್ಷಕರ ಕೊಟ್ಟಿದ್ದೇವೆ. ಮಾದರಿ ಶಾಲೆಗಳನ್ನ ಮಾಡಲು ಮುಂದಾಗಿದ್ದೇವೆ. ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳು ಮಾಡಲಿದ್ದೇವೆ. ಇಂಗ್ಲಿಷ್ ಮಕ್ಕಳಿಗೆ ಅನಿವಾರ್ಯವಾಗಿದೆ. ಸ್ಪೋಕನ್ ಇಂಗ್ಲಿಷ್ ಮಾಡಿಸುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : B Sriramulu | ಅದು ಅವರಪ್ಪ ಕುರ್ಚಿ.. ಡಿಕೆಶಿ ಸಿಎಂ ಆಗೋಕೆ ಬಿಡಲ್ಲ








