ಸರ್ಕಾರಕ್ಕೆ ಏನೇನು ಆಗಲ್ಲ, ಮುಂದೆ ಅಧಿಕಾರಕ್ಕೆ ನಾವೇ ಬರ್ತೀವಿ : ಪಾಟೀಲ್
ಚಿತ್ರದುರ್ಗ : ಒಬ್ಬರೂ ಇಬ್ಬರಿಗೆ ಬಿಟ್ಡರೇ ಯಾರಿಗೂ ಅನ್ಯಾಯ ಆಗಿಲ್ಲ ಎಲ್ಲಾ ಸರಿ ಹೋಗುತ್ತದೆ. ಸರ್ಕಾರಕ್ಕೆ ಏನೇನು ಆಗಲ್ಲ, ಮುಂದೆಯೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಚಿವ ಆನಂದ್ ಸಿಂಗ್ ವಿವಾರವಾಗಿ ಪ್ರತಿಕ್ರಿಯೆ ನೀಡಿದರು. ಆನಂದ್ ಸಿಂಗ್ ವಿಚಾರ ಸರಿ ಹೋಗುತ್ತದೆ. ಆನಂದ್ ಸಿಂಗ್ ಯಲ್ಲಾಪುರಕ್ಕೆ ಹೋಗಿದ್ದಾರೆಂದು ಹೇಳಿದ್ದಾರೆ. ಸಿಎಂ ಬಳಿ ಅವರ ಅಸಮಾಧಾನ ಹೇಳಿದ್ದಾರೆ, ಅದನ್ನ ಸರಿಪಡಿಸಿದ್ದಾರೆ.
ಪಕ್ಷದ ವರಿಷ್ಠರು, ಸಿಎಂ ಎಲ್ಲವನ್ನೂ ಸರಿ ಮಾಡುತ್ತಾರೆ. ಯಾವುದೇ ಇಲಾಖೆ ಇದ್ದರೂ ಸರ್ಕಾರದ ಇಲಾಖೆ, ಸರ್ಕಾರದ ಕೆಲಸ ದೇವರ ಕೆಲಸ ಎಂದ ಸಚಿವರು, ಆ ಇಲಾಖೆ ಹೆಚ್ಚು, ಈ ಇಲಾಖೆ ಹೆಚ್ಚು ಎಂದು ಮಾಡೋಕೆ ಆಗಲ್ಲ ಎಂದು ಹೇಳಿದರು.
ಸರ್ಕಾರ ತೆಗೆಯಲು ಎಲ್ಲರೂ ಒಟ್ಟಾಗಿ ಇದ್ವಿ ಎಂದು ಮಿತ್ರಮಂಡಳಿಯಲ್ಲಿನ ಬಿರುಕಿನ ಬಗ್ಗೆ ಮಾತನಾಡಿ, ಸರ್ಕಾರ ತೆಗೆದ ಬಳಿಕ ಸರ್ಕಾರ ರಚನೆ ಆಗಿದೆ.
ಒಬ್ಬರೂ ಇಬ್ಬರಿಗೆ ಬಿಟ್ಡರೇ ಯಾರಿಗೂ ಅನ್ಯಾಯ ಆಗಿಲ್ಲ ಎಲ್ಲಾ ಸರಿ ಹೋಗುತ್ತದೆ. ಸರ್ಕಾರಕ್ಕೆ ಏನೇನು ಆಗಲ್ಲ, ಮುಂದಿಯೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟಿನ್ ವಿಚಾರಕ್ಕೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪಾಟೀಲ್, ಕಾಂಗ್ರೆಸ್ ನವರು ಬಾರ್ ಗೆ ಹೋಗೋದೆ ಇಲ್ವಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರಿಗೆ ಯಾರಿಗೂ ಬಾರ್ ಗೊತ್ತಿಲ್ವಾ. ಹಸಿವಿಗೂ ಇಂದಿರಾ ಗಾಂಧಿಯವರಿಗೆ ಸಂಬಂಧ ನಾ. ಇಂದಿರಾಗಾಂಧಿ ಬಗ್ಗೆ ಗೌರವ ಇದೆ, ಈ ರೀತಿ ಹೋಲಿಕೆ ಮಾಜಿ ಸಿಎಂ ಘನತೆಗೆ ಸರಿಯಲ್ಲ ಎಂದು ಹೇಳಿದರು.









