ADVERTISEMENT
Friday, October 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

ಬಿ.ಸಿ. ಪಾಟೀಲ್ ರ ಅಳಿಯನ ಆತ್ಮಹತ್ಯೆಯ ಹಿಂದಿನ ಕಾರಣವೇನು?

ಮಕ್ಕಳಿಲ್ಲದ ಕೊರಗು ಸಾವಿಗೆ ಕಾರಣವಾಯಿತೇ?

Author2 by Author2
July 8, 2024
in Mumbai Karnataka, Kalyana karnataka, Karavali Karnataka, Malenadu Karnataka, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ, ಮುಂಬೈ ಕರ್ನಾಟಕ, ರಾಜ್ಯ, ಹಳೇ ಮೈಸೂರು
Share on FacebookShare on TwitterShare on WhatsappShare on Telegram

ಮಾಜಿ ಸಚಿವ ಬಿ.ಸಿ ಪಾಟೀಲ್ ಅವರ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದು, ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬಿ.ಸಿ. ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಅವರ ಪತಿ ಪ್ರತಾಪ್ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಹತ್ತಿರದ ಕಾಡಿನ ಬಳಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Related posts

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

October 16, 2026
ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

October 16, 2026

ಕೂಡಲೇ ಪ್ರತಾಪ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಅಳಿಯನ ಆತ್ಮಹತ್ಯೆ ಕುರಿತು ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದು, ಮಗಳ ಜೊತೆ 2008 ರಲ್ಲಿ ಮದುವೆ ಆಗಿತ್ತು. ಮಕ್ಕಳು ಆಗಿಲ್ಲ ಎಂಬ ನೋವಿನಲ್ಲಿ ಇದ್ದರು. ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಎರಡು ತಿಂಗಳು ಇದ್ದರು. ಆಗ ಸರಿ ಹೋಗಿದ್ದರು ಎಂದು ಹೇಳಿದ್ದಾರೆ.

ಇವತ್ತು ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆದರೆ, ಆನಂತರ ಸಾಯುತ್ತಿದ್ದೇನೆ ಎಂದು ಕುಟುಂಬಸ್ಥರಿಗೆ ಕಾಲ್ ಮಾಡಿ ಹೇಳಿದ್ದ. ಈ ವಿಚಾರವನ್ನು ಪ್ರತಾಪ್‌ ಅವರ ಅಣ್ಣ ಕಾಲ್ ಮಾಡಿ ಮಾಹಿತಿ ನೀಡಿದ್ದ. ಮದುವೆ ಆಗಿ 16 ವರ್ಷ ಆಗಿತ್ತು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಪ್ರತಾಪ್ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ ನನ್ನ ಜೊತೆಯೇ ತಿಂಡಿ ಸೇವಿಸಿದ್ದಾರೆ. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯ್ತು. ಈ ವಿಷಯ ಕೇಳಿ ತುಂಬಾ ನೋವಾಗಿದೆ. ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಮಂಗಳವಾರ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಆತ್ಮಹತ್ಯೆ ಮಾಡಿಕೊಂಡ ಪ್ರತಾಪ್ ಕುಮಾರ್, ವೈಯಕ್ತಿಕ ಕಾರಣಕ್ಕೆ ವಿಷ ಸೇವಿಸಿದ್ದಾರೆ. ಅವರು ಶಿವಮೊಗ್ಗ ಕಡೆಯಿಂದ ಕಾರಿನಲ್ಲಿ ಒಬ್ಬರೇ ಬಂದು ಕ್ರಿಮಿನಾಶಕ ಔಷಧಿ ‌ಕುಡಿದಿದ್ದಾರೆ. ಕುಡಿದು ಕಾರಿನಲ್ಲಿ ಅಸ್ವಸ್ಥರಾಗಿದ್ದರು. ಮೃತರ ಸಹೋದರ ಪ್ರಭು ಎಂಬುಬದರು ‌ಪೊಲೀಸರಿಗೆ ಮಾಹಿತಿ‌ ನೀಡಿದ್ದರು.‌ ನಂತರ ಪೊಲೀಸರು ಸ್ಥಳಕ್ಕೆ ಹೋಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೊನ್ನಾಳಿ ನಂತರ ಶಿವಮೊಗ್ಗ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇವರು ಕೃಷಿ ಹಾಗೂ ಇತರೇ ವ್ಯವಹಾರ ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಇದೊಂದು ವೈಯಕ್ತಿಕ ಕಾರಣದಿಂದ ನಡೆದ ಘಟನೆ. ಯಾವುದೇ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲ. ಮೊಬೈಲ್ ವಶಕ್ಕೆ ಪಡೆಯಲಾಗಿದ್ದು. ‌ಪರಿಶೀಲನೆ ಮಾಡಲಾಗುವುದು. ಆದರೆ, ಈ ಕುರಿತು ಯಾರೂ ದೂರು ನೀಡಿಲ್ಲ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಬಿ.ಸಿ. ಪಾಟೀಲ್ ರಿಗೆ ಈ ಮಾಹಿತಿ ತಡವಾಗಿ ಗೊತ್ತಾಗಿದೆ ಎನ್ನಲಾಗಿದೆ. ಪ್ರತಾಪ್ ಅವರ ಸಹೋದರ ಪೊಲೀಸರಿಗೆ ತಿಳಿಸಿ ನಂತರ ಬಿ. ಸಿ ಪಾಟೀಲ್ ರಿಗೂ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಬಿ.ಸಿ ಪಾಟೀಲ್ ಅಳಿಯನ ಮೊಬೈಲ್ ನಂಬರ್ ಹಾಗೂ ಕಾರು ನಂಬರ್ ಕೊಟ್ಟಿದ್ದಾರೆ. ನಮ್ಮ ಅಳಿಯ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ಕೂಡಲೇ ಅಳಿಯನನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಕಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಟ್ರೇಸ್ ಮಾಡಿ ಪತ್ತೆ ಹಚ್ಚಿದ್ದಾರೆ. ಆ ವೇಳೆ ಕಾರಿನಲ್ಲಿ ವಿಷ ಸೇವಿಸಿ ನರಳಾಡುತ್ತಿದ್ದರು ಎನ್ನಲಾಗಿದೆ. ಕೂಡಲೇ ಪೊಲೀಸರು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಪ್ರತಾಪ್ ಅವರನ್ನು ದಾಖಲಿಸಿದ್ದಾರೆ. ಆದರೆ, ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಾವ ಬಿ.ಸಿ. ಪಾಟೀಲ್ ಹೇಳಿದ್ದಂತೆ ಮಕ್ಕಳಾಗಿಲ್ಲ ಎಂಬ ಕೊರಗು ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

Tags: B.C. What is the reason behind Patil's son-in-law's suicide?
ShareTweetSendShare
Join us on:

Related Posts

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

by Shwetha
October 16, 2026
0

ಕನ್ನಡದ ಜನಪ್ರಿಯ ನಿರೂಪಕಿ ಆಂಕರ್ ಅನುಶ್ರೀ ಅವರು ಸುದೀರ್ಘ ವಿರಾಮದ ನಂತರ ತಮ್ಮ ಯೂಟ್ಯೂಬ್ ಚಾನಲ್ ಗೆ ಮರಳಿದ್ದಾರೆ. ಆದರೆ ಈ ಪುನರಾಗಮನವು ಅವರಿಗೆ ಶುಭ ಸುದ್ದಿಗಿಂತ...

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

by Shwetha
October 16, 2026
0

ನಗರದ ಮನೆಗಳ ಮುಂದೆ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ,...

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಕರಾವಳಿ, ಮಲೆನಾಡು ಸೇರಿ ಹಲವೆಡೆ IMD ಮುನ್ಸೂಚನೆ

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಕರಾವಳಿ, ಮಲೆನಾಡು ಸೇರಿ ಹಲವೆಡೆ IMD ಮುನ್ಸೂಚನೆ

by Shwetha
October 16, 2026
0

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 16ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಮತ್ತು...

ನಾಲಿಗೆ ಮೇಲೆ ಹಿಡಿತವಿರಲಿ ನಮ್ಮ ತಂದೆಯ ಬಗ್ಗೆ ಮಾತಾಡಿದ್ರೆ ಸುಮ್ಮನಿರಲ್ಲ,ನಾನು ಬಾಯಿ ಬಿಟ್ಟರೆ ನೀವ್ ಮತ್ತೊಮ್ಮೆ ಹಾರ್ಟ್ ಸರ್ಜರಿ ಮಾಡ್ಕೋಬೇಕಾಗುತ್ತೆ: ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ  ಎಚ್ಚರಿಕೆ

ನಾಲಿಗೆ ಮೇಲೆ ಹಿಡಿತವಿರಲಿ ನಮ್ಮ ತಂದೆಯ ಬಗ್ಗೆ ಮಾತಾಡಿದ್ರೆ ಸುಮ್ಮನಿರಲ್ಲ,ನಾನು ಬಾಯಿ ಬಿಟ್ಟರೆ ನೀವ್ ಮತ್ತೊಮ್ಮೆ ಹಾರ್ಟ್ ಸರ್ಜರಿ ಮಾಡ್ಕೋಬೇಕಾಗುತ್ತೆ: ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

by Shwetha
October 16, 2026
0

ರಾಜ್ಯ ರಾಜಕಾರಣದ ಸ್ಟಿಂಗ್ ಆಪರೇಷನ್ ಕಿಚ್ಚು ಈಗ ಅತ್ಯಂತ ವೈಯಕ್ತಿಕ ಮಟ್ಟದ ವಾಕ್ಸಮರಕ್ಕೆ ತಿರುಗಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ನಾಲಾಯಕ್ ಹೇಳಿಕೆಗೆ...

ಬಾ, ನನ್ನನ್ನು ಅರೆಸ್ಟ್ ಮಾಡು: ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ಸವಾಲು; ಸ್ಟಿಂಗ್ ಆಪರೇಷನ್ ವಿವಾದ ತೀವ್ರ

ಬಾ, ನನ್ನನ್ನು ಅರೆಸ್ಟ್ ಮಾಡು: ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ಸವಾಲು; ಸ್ಟಿಂಗ್ ಆಪರೇಷನ್ ವಿವಾದ ತೀವ್ರ

by Shwetha
October 16, 2026
0

ಕರ್ನಾಟಕದ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಆಗ್ರಹವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram