ರಾಜೀನಾಮೆ ನೀಡುವ `ಯಡಿಯೂರಪ್ಪಗಾಗಿ ವಿಶೇಷ ಹುದ್ದೆ’ ಸೃಷ್ಠಿ

1 min read
State Budget

ರಾಜೀನಾಮೆ ನೀಡುವ `ಯಡಿಯೂರಪ್ಪಗಾಗಿ ವಿಶೇಷ ಹುದ್ದೆ’ ಸೃಷ್ಠಿ

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗೋದು ಬಹುತೇಕ ಫಿಕ್ಸ್ ಆಗಿದೆ. ಜುಲೈ 26 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಅಲ್ಲಕಲ್ಲೋಲ್ಲ ಸೃಷ್ಠಿ ಮಾಡುವುದರ ಜೊತೆಗೆ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಅದರಲ್ಲಿ ಮುಂದಿನ ಸಿಎಂ ಯಾರು..? ಅನ್ನುವ ಪ್ರಶ್ನೆಯಾದರೇ, ಮತ್ತೊಂದು ರಾಜೀನಾಮೆ ಬಳಿಕ ಯಡಿಯೂರಪ್ಪನವರ ಸ್ಥಾನಮಾನವೇನು..? ಈ ಎರಡು ಪ್ರಶ್ನೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ.

ಈ ಎರಡು ಪ್ರಶ್ನೆಗಳ ಪೈಕಿ ಮುಂದಿನ ಸಿಎಂ ಯಾರು ಅನ್ನೋದು ಒಂದು ರೀತಿಯಾಗಿ ಚಿದಂಬರ ರಹಸ್ಯವಾಗಿಬಿಟ್ಟಿದೆ. ಆ ಮೇಲಿರುವ ಬಿಜೆಪಿ ವರಿಷ್ಠರು ಯಾರನ್ನ ಸಿಎಂ ಸ್ಥಾನದಲ್ಲಿ ಕೂರಿಸ್ತಾರೆ ಅನ್ನೋ ಯಾರ ಊಹೆಗೆ ಸಿಗುತ್ತಿಲ್ಲ. ಆದ್ದರಿಂದ ಅದರ ವಿಚಾರ ಪಕ್ಕಕ್ಕೆ ಇಟ್ಟು ನಮ್ಮ ಇನ್ನೊಂದು ಪ್ರಶ್ನೆ, ರಾಜೀನಾಮೆ ಬಳಿಕ ಯಡಿಯೂರಪ್ಪನವರ ಸ್ಥಾನಮಾನವೇನು..? ಅನ್ನೋದ್ರ ಬಗ್ಗೆ ಚರ್ಚೆ ಮಾಡೋಣ.

ಬೂಕನಕೆರೆ ಸಿದ್ದಲಿಂಗ ಯಡಿಯೂರಪ್ಪ..! ರಾಜ್ಯ ಬಿಜೆಪಿಯ ರಾಜಾಹುಲಿ..! ಇದು ಕೇವಲ ಹೆಸರಲ್ಲ ರಾಜ್ಯ ಕೇಸರಿ ಪಡೆಯ ಶಕ್ತಿ. ಕೇವಲ ಸೋಲೆಂದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಪಕ್ಷವನ್ನು ಅಧಿಕಾರಕ್ಕೆ ತಂದ ಛಲದಂಕ ಮಲ್ಲ ಬಿಎಸ್ ಯಡಿಯೂರಪ್ಪ. ಒಬ್ಬಿಬ್ಬರಿಂದ ಆರಂಭಿಸಿ ದೊಡ್ಡ ಸೈನ್ಯವನ್ನೇ ಕಟ್ಟಿದ ತ್ರಿವಿಕ್ರಮ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಬಾವುಟ ಹಾರಿಸಿದ ಮಾಸ್ ಲೀಡರ್. ಭಾರತೀಯ ಜನತಾ ಪಾರ್ಟಿಗಾಗಿ ಬಿ.ಎಸ್.ಯಡಿಯೂರಪ್ಪ ತಮ್ಮ ತನುಮನ ಎಲ್ಲವನ್ನು ಧಾರೆದಿದ್ದಾರೆ. ಇಂದು ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡದಾಗಿ ಬೆಳಯಲು ಏಕೈಕ ಕಾರಣ ಬಿ.ಎಸ್.ಯಡಿಯೂರಪ್ಪ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಯಡಿಯೂರಪ್ಪ ಅಂದ್ರೆ ಬಿಜೆಪಿ. ಬಿಜೆಪಿ ಅಂದ್ರೆ ಯಡಿಯೂರಪ್ಪ. ಆದ್ರೆ ಈಗ ಕಾಲ ಬದಲಾಗಿದೆ.

B S Yediyurappa saaksha tv

ಸಾಕಷ್ಟು ಬಾರಿ ಸೂರ್ಯ ಹುಟ್ಟಿದ್ದಾನೆ. ಅದರಂತೆ ಯಡಿಯೂರಪ್ಪ ಅವರಿಗೂ ವಯಸ್ಸಾಗಿದೆ. ಅವರು ಈಗ ತಮ್ಮ ಸುದೀರ್ಘ ಹೋರಾಟ ರಾಜಕೀಯ ಜೀವನದಲ್ಲಿ ಅಂತಿಮಘಟ್ಟ ತಲುಪಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅನ್ನೋದು ಎಲ್ಲರ ಲೆಕ್ಕಾಚಾರ. ಹಾಗಾದ್ರೆ ಬಿಜೆಪಿಗಾಗಿ ಓಡಾಡುವ ವಯಸ್ಸಿಂದಲೇ ಹೋರಾಟ ಮಾಡಿಕೊಂಡಿರುವ ಬಿಎಸ್ ವೈ ಅವರ ಮುಂದಿನ ಸ್ಥಿತಿಗತಿ ಏನು..?

ರಾಜ್ಯಪಾಲರಾಗಲ್ಲ.. ಬಿಎಸ್ ವೈಗಾಗಿ ವಿಶೇಷ ಹುದ್ದೆ..?

ಈ ಹಿಂದೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇಳಿಬಂದಾಗ ಯಡಿಯೂರಪ್ಪ ಅವರನ್ನು ರಾಜ್ಯಪಾಲರನ್ನಾಗಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಯಡಿಯೂರಪ್ಪನವರ ಹೇಳಿಕೆಗಳನ್ನು ಗಮನಿಸಿದ್ರೆ ಅವರು ರಾಜ್ಯದಲ್ಲೇ ಉಳಿಯಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಕ್ರಿಯರಾಗಲಿದ್ದಾರೆ ಎಂದು ತಿಳಿದುಬರುತ್ತಿದೆ.

ಹಾಗಾದ್ರೆ ಬಿಎಸ್ ವೈಗಾಗಿ ವಿಶೇಷ ಹುದ್ದೆ ಸೃಷ್ಠಿಯಾಗುತ್ತಾ..? ಹೌದು..! ಬಿಎಸ್ ಯಡಿಯೂರಪ್ಪ ಮುಂದಿನ ಚುನಾವಣೆ ಜವಾಬ್ದಾರಿಯ ಹೊಣೆಯನ್ನು ಹೊತ್ತಿಕೊಂಡಿದ್ದಾರೆ. ಆ ಜವಾಬ್ದಾರಿಯನ್ನು ನಿರ್ವಹಿಸಬೇಕಾದ್ರೆ ಅವರು ಖಚಿತವಾಗಿ ಆಯಕಟ್ಟು ಜಾಗದಲ್ಲಿ ಇರಬೇಕಾಗುತ್ತದೆ. ಈಗ ಸಿಎಂ ಸ್ಥಾನವೂ ಇಲ್ಲ.. ರಾಜ್ಯಾಧ್ಯಕ್ಷನ ಸ್ಥಾನವೂ ಇಲ್ಲ ಅಂದ್ರೆ ಯಡಿಯೂರಪ್ಪ ಮತ್ಯಾವ ಸ್ಥಾನದಲ್ಲಿ ಇರಲಿದ್ದಾರೆ.

ಬಿಜೆಪಿಯ ಗೌರವಾಧ್ಯಕ್ಷರಾಗ್ತಾರಾ ಯಡಿಯೂರಪ್ಪ..?

ಹೌದು..! ಬಿಜೆಪಿ ಮುಂದಿನ ಚುನಾವಣೆಯಲ್ಲಿ ಪ್ರಬಲವಾಗಿ ಮುನ್ನುಗ್ಗಲು ಯಡಿಯೂರಪ್ಪ ಅತ್ಯವಶ್ಯಕ. ಅವರನ್ನು ಮೂಲೆಗುಂಪು ಮಾಡಿ ರಾಜ್ಯದಲ್ಲಿ ಕಮಲವನ್ನು ಅರಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಅವರಿಗಾಗಿ ರಾಜ್ಯ ಬಿಜೆಪಿ ಘಟಕದಲ್ಲಿ ಗೌರವಾಧ್ಯಕ್ಷ ಸ್ಥಾನ ಸೃಷ್ಠಿ ಮಾಡಲು ಹೈಕಮಾಂಡ್ ಮುಂದಾಗುತ್ತಾ ಅನ್ನೋ ಕುತೂಹಲಕಾರಿ ಪ್ರಶ್ನೆ ಇದೀಗ ರಾಜಕೀಯ ಪಂಡಿತರಲ್ಲಿ ಮನೆ ಮಾಡಿದೆ…

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd