BS Yeddyurappa | ಕಾಂಗ್ರೆಸ್ ಏನ್ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ
ಹುಬ್ಬಳ್ಳಿ : ಕಾಂಗ್ರೆಸ್ ಏನ್ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಏನ್ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ.
ಜನ ಬಿಜೆಪಿ, ಮೋದಿ ಪರ ಇದ್ದಾರೆ. ಕಾಂಗ್ರೆಸ್ ನವರು ಏನ್ ಮಾಡಿದ್ರು ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.

ಭಾರತ ಜೊಡೋ, ರಥಯಾತ್ರೆ ಏನ್ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.
ನಾನು 22 ರಿಂದ ರಾಜ್ಯ ಪ್ರವಾಸ ಮಾಡ್ತೀನಿ. ಬೈಲಹೊಂಗಲದಲ್ಲಿ ಕಾರ್ಯಕ್ರಮ ಇದೆ, ಮುಗಿಸಿ ಬೆಂಗಳೂರಿಗೆ ಹೋಗ್ತೀನಿ ಎಂದು ಬಿಎಸ್ ವೈ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ವಿಮ್ಸ್ ಸಾವು ಪ್ರಕರಣ ಸಂಬಂಧ ಸ್ಪಂದಿಸಿ, ತನಿಖೆ ನಡೀತಿದೆ ನೋಡೋಣ ಎಂದರು. B S Yediyurappa