ಇನ್ಮುಂದೆ ಬಿಎಸ್ ವೈ ಬಗ್ಗೆ ಮಾತನಾಡಲ್ಲ : ವಾಟಾಳ್ ನಾಗರಾಜ್
ಚಾಮರಾಜನಗರ : ಬಿ.ಎಸ್.ಯಡಿಯೂರಪ್ಪ ಈಗ ಅಧಿಕಾರದಿಂದ ಇಳಿದಿದ್ದಾರೆ. ಆದ್ದರಿಂದ ಇಂದಿನಿಂದಲೇ ನಾನು ಒಂದಕ್ಷರ ಅವರ ವಿಚಾರ ಮಾತನಾಡುವುದಿಲ್ಲ. ಏನಾದರೂ ಆಗಿರಲಿ ಯಡಿಯೂರಪ್ಪ ಅವರ ಬಗ್ಗೆ ಇನ್ಮುಂದೆ ಮಾತನಾಡಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಡಿಯೂರಪ್ಪ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷಯಿಲ್ಲ. ಯತ್ನಾಳ್ ಅವರದ್ದು ವೈಯಕ್ತಿಕ ದ್ವೇಷ, ನಾನು ವಿಚಾರ, ಸಮಸ್ಯೆಗಳ ವಿರೋಧಿ. ಯತ್ನಾಳ್ ಅವರಿಗಿರುವಂತೆ ನನಗೆ ವೈಯಕ್ತಿಕ ದ್ವೇಷವಿಲ್ಲ, ಬಿಎಸ್ ವೈ ಮತ್ತು ನಾನು ಇಬ್ಬರು ಸ್ನೇಹಿತರು, ಅಧಿಕಾರದಲ್ಲಿದ್ದಾಗ ಅವರ ನಡೆಗೆ ನನ್ನ ವಿರೋಧವಿತ್ತು ಎಂದು ನಿರ್ಗಮಿತ ಸಿಎಂ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದರು.
ಇದೇ ವೇಳೆ ನಿನ್ನೆ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡಿದರ ಬಗ್ಗೆ ಮಾತನಾಡಿ, ಮೃತ ಅಭಿಮಾನಿ ಮನೆಗೆ ಸಾಂತ್ವನ ಹೇಳಲು ಹೆಲಿಕಾಪ್ಟರ್‍ನಲ್ಲಿ ಹೋಗಿದ್ದ ಯಡಿಯೂರಪ್ಪನವರು, ಚಾಮರಾಜನಗರದಲ್ಲಿ 36 ಮಂದಿ ಆಕ್ಸಿಜನ್ ಇಲ್ಲದೇ ಸತ್ತಾಗ ಎಲ್ಲಿ ಹೋಗಿದ್ರು ಎಂದು ಪ್ರಶ್ನಿಸಿದರು. ಚಾಮರಾಜನಗರಕ್ಕೆ ಬರಲಿಲ್ಲ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕೊಡಲಿಲ್ಲ. ಈಗ ಅಧಿಕಾರದಿಂದ ಇಳಿದಿದ್ದಾರೆ, ಆದ್ದರಿಂದ ಇಂದಿನಿಂದಲೇ ನಾನು ಒಂದಕ್ಷರ ಅವರ ವಿಚಾರ ಮಾತನಾಡುವುದಿಲ್ಲ, ಏನಾದರೂ ಆಗಿರಲಿ ಯಡಿಯೂರಪ್ಪ ಅವರ ಬಗ್ಗೆ ಇನ್ಮುಂದೆ ಮಾತನಾಡಲ್ಲ ಎಂದರು.
ಇನ್ನು ಬಸವರಾಜ ಬೊಮ್ಮಾಯಿ ಚಾಮರಾಜನಗರಕ್ಕೆ ಬರಬೇಕು ಎಂದು ಒತ್ತಾಯಿಸಿದ ವಾಟಾಳ್, ಇಲ್ಲೇ ಸಂಪುಟ ಸಭೆ ನಡೆಸಿ ಚಾಮರಾಜನಗರ ಜನರ ಆಸೆ-ಆಕಾಂಕ್ಷೆಗಳನ್ನು ನೆರವೇರಿಸಬೇಕು. ಚಾಮರಾಜನಗರಕ್ಕೆ 5 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಒತ್ತಾಯಿಸಿದರು.