ಟಿ-20 ವಿಶ್ವಕಪ್ 2021- ವಿರಾಟ್ ಕೊಹ್ಲಿ ದಾಖಲೆ ಅಳಿಸಿ ಹಾಕಿದ ಬಾಬರ್ ಅಝಮ್..!

1 min read
virat kohli babar azam t-20 wolrd cup saakshatv

ಟಿ-20 ವಿಶ್ವಕಪ್ 2021- ವಿರಾಟ್ ಕೊಹ್ಲಿ ದಾಖಲೆ ಅಳಿಸಿ ಹಾಕಿದ ಬಾಬರ್ ಅಝಮ್..!

babar azam pakistan t-20 wolrdcup 2021 sports karnatakaಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಅವರು ಎರಡು ದಾಖಲೆಗಳನ್ನು ಬರೆದಿದ್ದಾರೆ.
ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ್ರೂ ಪಾಕ್ ತಂಡ ಬಾಬರ್ ಅಝಮ್ ನಾಯಕತ್ವದಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡಿದೆ.
ಸೂಪರ್ -12ರ ಲೀಗ್ ಪಂದ್ಯದ ಐದು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಪಾಕಿಸ್ತಾನ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಫೈನಲ್ ಪ್ರವೇಶಿಸುವ ಆಸೆ ಕಮರಿ ಹೋಯ್ತು.
ಆದ್ರೆ 2021ರ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ನಾಯಕ ಬಾಬರ್ ಅಝಮ್ ಅವರು ಬ್ಯಾಟಿಂಗ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಆಡಿರುವ ಆರು ಪಂದ್ಯಗಳಲ್ಲಿ 269 ರನ್ ದಾಖಲಿಸಿದ್ದಾರೆ. ಈ ಮೂಲಕ ಟಿ- 20 ವಿಶ್ವಕಪ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಹಿರಿಮೆಗೂ ಪಾತ್ರರಾಗಿದ್ದರೆ. ಈ ಹಿಂದೆ ಆಸ್ಟ್ರೇಲಿಯಾ ಮ್ಯಾಥ್ಯೂ ಹೇಡನ್ 265 ರನ್ ಗಳಿಸಿದ್ರೆ, ಇಂಗ್ಲೆಂಡ್ ನ ಜಾಯ್ ರೂಟ್ ಅವರು 249 ರನ್ ದಾಖಲಿಸಿದ್ದರು. ಈ ಎರಡು ದಾಖಲೆಗಳನ್ನು ಬಾಬರ್ ಅಝಮ್ ಅವರು ಈ ಬಾರಿಯ ವಿಶ್ವಕಪ್ ನಲ್ಲಿ ಅಳಿಸಿ ಹಾಕಿದ್ದಾರೆ.
ಇನ್ನೊಂದೆಡೆ ಬಾಬರ್ ಅಝಮ್ ಅವರು ವಿರಾಟ್ ಕೊಹ್ಲಿಯ ದಾಖಲೆಯನ್ನು ಕೂಡ ಅಳಿಸಿ ಹಾಕಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ವೇಗವಾಗಿ 2500 ರನ್ ಪೂರೈಸಿದ್ದ ದಾಖಲೆ ಈಗ ಬಾಬರ್ ಅಝಮ್ ಅವರ ಹೆಸರಿನಲ್ಲಿ ಅಂಟಿಕೊಂಡಿದೆ.
ಈ ಹಿಂದೆ ವಿರಾಟ್ ಕೊಹ್ಲಿ 68 ಇನಿಂಗ್ಸ್ ಗಳಲ್ಲಿ 2500 ರನ್ ಪೂರೈಸಿದ್ದರು. ಆದ್ರೆ ಬಾಬರ್ ಅಝಮ್ ಅವರು 62 ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಆರೋನ್ ಫಿಂಚ್ 78 ಇನಿಂಗ್ಸ್ ಹಾಗೂ ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ಅವರು 83 ಇನಿಂಗ್ಸ್ ನಲ್ಲಿ 2500 ರನ್ ದಾಖಲಿಸಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd