ದೆಹಲಿಯಲ್ಲಿ ಬಬ್ಬರ್ ಖಲ್ಸಾ ಇಂಟರ್‌ನ್ಯಾಷನಲ್’ನ ಉಗ್ರರ ಬಂಧನ
ಹೊಸದಿಲ್ಲಿ, ಸೆಪ್ಟೆಂಬರ್07: ದೆಹಲಿಯಲ್ಲಿ ಇಬ್ಬರು ಬಬ್ಬರ್ ಖಲ್ಸಾ ಅಂತರರಾಷ್ಟ್ರೀಯ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರು ದೆಹಲಿ, ಪಂಜಾಬ್ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ .
ನಿರಂಕರಿ ಕಾಲೋನಿ ಬಳಿ ದೆಹಲಿ ಪೊಲೀಸರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ನಂತರ ದೆಹಲಿ ವಿಶೇಷ ಪೊಲೀಸ್ ಅಧಿಕಾರಿಗಳು ಬಬ್ಬರ್ ಖಲ್ಸಾ ಇಂಟರ್‌ನ್ಯಾಷನಲ್‌ನ (ಬಿಕೆಐ) ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರನ್ನು ಲುಧಿಯಾನ ನಿವಾಸಿಗಳಾದ ಕುಲ್ವಂತ್ ಸಿಂಗ್ ಮತ್ತು ಭೂಪೇಂದರ್ ಅಲಿಯಾಸ್ ದಿಲವಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ದೆಹಲಿ ಮತ್ತು ಪಂಜಾಬ್‌ನ ರಾಜಕಾರಣಿಗಳು ಅವರ ಗುರಿಯಾಗಿದ್ದರು. ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ.