ಶ್ವಾನಕ್ಕೆ ಸೀಮಂತ – ಗರ್ಭಿಣಿ ನಾಯಿಗೆ ಅದ್ದೂರಿ ಸೀಮಂತ ಕಾರ್ಯ…
1 min read
ಶ್ವಾನಕ್ಕೆ ಸೀಮಂತ – ಗರ್ಭಿಣಿ ನಾಯಿಗೆ ಅದ್ದೂರಿ ಸೀಮಂತ ಕಾರ್ಯ…
ಮನೆಯ ಸಾಕು ನಾಯಿಯೊಂದಕ್ಕೆ ಸೀಮಂತ ಕಾರ್ಯಕ್ರಮ ನಡೆಸಿವ ಘಟನೆ ಬಾಗಲಕೋಟೆಯಲ್ಲಿ ವರದಿಯಾಗಿದೆ. ಶ್ವಾನಕ್ಕೆ ಸೀಮಂತ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ರಂಗಭೂಮಿ ಕಲಾವಿದೆಯಾಗಿರುವ ಜ್ಯೋತಿ ಗುಳೇದಗುಡ್ಡ ಎಂಬುವವರು ಚಿಂಕವ್ವ ಹೆಸರಿನ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ನಡೆಸಿದ್ದಾರೆ. ಕಲಾವಿದೆಯ ಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.
ಜೂಲಿ ಬ್ರೀಡ್ ಗೆ ಸೇರಿದ ಗರ್ಭಿಣಿ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ ಅರಿಸಿನ ಹಚ್ಚಿ ಆರತಿ ಬೆಳಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು ಹಂಪಲ, ಸಿಹಿ ತಿನಿಸು ಮಾಡಿ ಬಡಿಸಿದ್ದಾರೆ ಜ್ಯೋತಿ ಸೀಮಂತ ಕಾರ್ಯ ನಡೆಯುವ ವೇಳೆ ಶಾಂತತೆಯಿಂದ ಕುಳಿತಿರುವ ಶ್ವಾನದ ವೀಡಿಯೋ ವೈರಲ್ ಆಗಿದೆ.
ಸೀಮಂತ ಮಾಡಿಸಿಕೊಂಡ ಒಂದು ವಾರದ ಬಳಿಕ ಜೂಲಿ ಹೆಸರಿನ ಶ್ವಾನ ಆರು ಮರಿಗಳಿಗೆ ಜನ್ಮ ನೀಡಿದೆ. ಮೂರು ಹೆಣ್ಣು, ಮೂರು ಗಂಡು ಮರಿಗಳಿಗೆ ಜನ್ಮ ನೀಡಿರುವ ಜೂಲಿ ಬ್ರೀಡ್ ನ ಚಿಂಕವ್ವ ಆರೋಗ್ಯವಾಗಿದೆ.