ಭಜ್ಜಿ ಬೌಲಿಂಗ್ ನಲ್ಲಿ ಬಚ್ಚನ್ ಸಿಕ್ಸರ್… Bachchan saaksha tv
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸಿದ್ದಾರೆ.
ಬಿಗ್ ಬಿ ಭಜ್ಜಿಗೆ ಸಿಕ್ಸರ್ ಹೊಡೆದಿರೋದು ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಾಗಿ ಕೌನ್ ಬನೇಗಾ ಕರೋಡ್ ಪತಿ ವೇದಿಕೆಯಲ್ಲಿ.
ಕೌನ್ ಬನೇಗಾ ಕರೋಡ್ ಪತಿ 13ನೇ ಸೀಸನ್ ಕ್ಕೆ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಗೆಸ್ಟ್ ಗಳಾಗಿ ಆಗಮಿಸಿದ್ದಾರೆ.
ಅತ್ಯಂತ ರಸವತ್ತಾಗಿ ಸಾಗಿದ ಈ ಕಾರ್ಯಕ್ರಮದಲ್ಲಿ ಭಜ್ಜಿ ಜೊತೆ ಬಿಗ್ ಬಿ ಕ್ರಿಕೆಟ್ ಆಡಿದ್ದಾರೆ. ಈ ಇಬ್ಬರ ಸೆಣಸಾಟಕ್ಕೆ ಇರ್ಫಾನ್ ಕಮೆಂಟರಿ ಕೊಟ್ಟಿದ್ದಾರೆ.
ಹರ್ಭಜನ್ ಹಾಕಿದ ಮೊದಲ ಎಸೆತವನ್ನು ಬಿಗ್ ಬಿ ಬೌಂಡರಿ, ಬಾರಿಸಿದ್ರೆ, ಎರಡನೇ ಎಸೆತವನ್ನು ಸಿಕ್ಸರ್ ಬಾರಿಸಿದ್ದು, ಇರ್ಫಾನ್ ಭಜ್ಜಿಯನ್ನ ಕಿಚಾಯಿಸಿದ್ದಾರೆ.
ಯಾರ್ ಇಟ್ಸ್ ಸಿಕ್ಸರ್.. ಭಜ್ಜಿ ಕೈಯಲ್ಲಿನ ಬಾಲ್ ಅಮಿತಾಬ್ ಬ್ಯಾಟ್ ಜೊತೆ ಸೋತಿದೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.