ಬಳ್ಳಾರಿ ಜಿಲ್ಲೆಗೆ ಜನಾರ್ಧನ ರೆಡ್ಡಿ ಎಂಟ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಸಲಾಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಚನ್ನಬಸಬಸ್ವಾಮಿಯ ಬೆಳ್ಳಿ ರಥ ಎಳೆಯುವ ಮೂಲಕ ಜನಾರ್ಧನ ರೆಡ್ಡಿ ಹಾಗೂ ಅವರ ಪತ್ನಿ ಹರಕೆ ತೀರಿಸಿದರು. ಅಲ್ಲದೇ, ಬಳ್ಳಾರಿಗೆ ತೆರಳುವುದಕ್ಕೂ ಮುನ್ನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ದಂಪತಿ ಭೇಟಿ ನೀಡಿದರು. ಅಂಜನಾದ್ರಿಯಲ್ಲಿ ಕೂಡ ವಿಶೇಷ ಪೂಜೆ ನೆರವೇರಿಸಲಾಯಿತು.
ಬಳ್ಳಾರಿ ಎಂಟ್ರಿಗೆ ಸುಪ್ರೀಂಕೋರ್ಟ್ ಅಸ್ತು ಎಂದಿರುವ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಹರಕೆ ತೀರಿಸಿದ್ದಾರೆ. 14 ವರ್ಷಗಳಿಂದ ಬಳ್ಳಾರಿಯಿಂದ ದೂರ ಇದ್ದ ರೆಡ್ಡಿಗೆ ಸದ್ಯ ಗಣೇಶನ ಅನುಗ್ರಹದಿಂದ ಮತ್ತೆ ಬಳ್ಳಾರಿ ಎಂಟ್ರಿಗೆ ಅವಕಾಶ ಸಿಕ್ಕಿದೆ. ಗಂಗಾವತಿ ನಗರದ ವಿಜಯವೃಂದ ಗಣೇಶನ ಎದುರು ಪೂಜೆ ಸಲ್ಲಿಸಿದ್ದಾರೆ. ಆನಂತರ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.