ಸಿಹಿಯಾದ ಬಾದುಷಾ ಮಾಡೋದು ಹೇಗೆ..ತಿಳಿಯೋಣ..
ಬೇಕಾಗುವ ಸಾಮಾಗ್ರಿಗಳು:
ತುಪ್ಪ: 2 ಟೇಬಲ್ ಸ್ಪೂನ್
ಮೊಸರು: 2 ಟೇಬಲ್ ಸ್ಪೂನ್
ಬೇಕಿಂಗ್ ಸೋಡಾ: 1/4 ಚಮಚ
ಬೇಕಿಂಗ್ ಪೌಡರ್: 1/4 ಚಮಚ
ಸಕ್ಕರೆ : 1 ಚಮಚ
ಉಪ್ಪು: ಚಿಟಿಕೆ
ಮೈದಾ: 1 ಕಪ್
ನೀರು: ಅಗತ್ಯಕ್ಕೆ ತಕ್ಕಷ್ಟು
ಸಕ್ಕರೆ ಪಾಕಕ್ಕೆ:
ಸಕ್ಕರೆ: 1 ಕಪ್
ನೀರು: ಸಕ್ಕರೆ ಕರಗಲು ಅಗತ್ಯವಿರುವಷ್ಟು
ಏಲಕ್ಕಿ ಪುಡಿ: 1/2 ಚಮಚ
ನಿಂಬೆ ರಸ: 1/2 ಚಮಚ
ಮಾಡುವ ವಿಧಾನ:
1. ಹಿಟ್ಟು ತಯಾರಿ:
ಒಂದು ಬಟ್ಟಲಿನಲ್ಲಿ 2 ಟೇಬಲ್ ಸ್ಪೂನ್ ತುಪ್ಪ, 2 ಟೇಬಲ್ ಸ್ಪೂನ್ ಮೊಸರು, 1/4 ಚಮಚ ಬೇಕಿಂಗ್ ಸೋಡಾ, 1/4 ಚಮಚ ಬೇಕಿಂಗ್ ಪೌಡರ್, 1 ಚಮಚ ಸಕ್ಕರೆ, ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
1 ಕಪ್ ಮೈದಾ ಹಾಕಿ, ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ, ಚಪಾತಿ ಹಿಟ್ಟು Consistencyಗೆ ಬರುವವರೆಗೆ ಚೆನ್ನಾಗಿ ನಾದಿ.
ಹಿಟ್ಟನ್ನು 10 ನಿಮಿಷ ಹಾಗೆಯೇ ಇರಿಸಿರಿ.
2. ಸಕ್ಕರೆ ಪಾಕ ತಯಾರಿ:
ಒಂದು ಕಡಾಯಿಯಲ್ಲಿ 1 ಕಪ್ ಸಕ್ಕರೆ ಮತ್ತು ನೀರು ಹಾಕಿ, ಸಕ್ಕರೆ ಕರಗುವವರೆಗೆ ಕುದಿಸಿ.
ಪಾಕ ಬರುವವರೆಗೆ ಕುದಿಸಿ.
ಅದಕ್ಕೆ 1/2 ಚಮಚ ಏಲಕ್ಕಿ ಪುಡಿ ಮತ್ತು 1/2 ಚಮಚ ನಿಂಬೆ ರಸ ಸೇರಿಸಿ. ಮಿಶ್ರಣ ಮಾಡಿ.
3. ಬಾದುಷಾ ಆಕಾರ:
ತಯಾರಾದ ಹಿಟ್ಟನಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ.
ಪ್ರತಿಯೊಂದು ಉಂಡೆಯನ್ನು ಸ್ವಲ್ಪ ಚಪ್ಪಟೆ ಮಾಡಿ, ಮಧ್ಯೆ ಸ್ವಲ್ಪ ಗುಂಡಿ ಮಾಡಿ.
4. ಕರಿಯಿರಿ :
ಬಾಣಲೆಯಲ್ಲಿ ಎಣ್ಣೆಯನ್ನು ಕಡಿಮೆ ತಾಪಮಾನದಲ್ಲಿ ಬಿಸಿ ಮಾಡಿ.
ತಯಾರಾದ ಬಾದುಷಾವನ್ನು ಎಣ್ಣೆಗೆ ಹಾಕಿ, ಬಣ್ಣ ಬದಲಾಗುವವರೆಗೆ ನಿಧಾನವಾಗಿ ಕರಿಯಿರಿ.
5. ಸಕ್ಕರೆ ಪಾಕದಲ್ಲಿ ನೆನೆಸಿ
ಬಾದುಷಾ ಕರಿದ ತಕ್ಷಣ ಸಕ್ಕರೆ ಪಾಕದಲ್ಲಿ ಹಾಕಿ, ಸ್ವಲ್ಪ ಸಮಯ ಹಾಗೇಯೇ ಬಿಡಿ.
6. ಬಾದುಷಾ ರೆಡಿ:
ಪಾಕದಿಂದ ತೆಗೆದು ತಣ್ಣಗಾಗಲು ಬಿಡಿ.
ರುಚಿಯಾದ ಬಾದುಷಾ ಸವಿಯಲು ಸಿದ್ಧವಾಗಿದೆ!








